ಕೆಎಮ್ಎಫ್ ನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚನೆ ಮಾಡಿದ ಸ್ಯಾಂಡಲ್ವುಡ್ ನಿರ್ಮಾಪಕನ ಬಂಧನವಾಗಿದೆ.
ಶಬಾಷ್ ಬಡ್ಡಿ ಮಗನೇ ಎಂಬ ಕನ್ನಡ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಪ್ರಕಾಶ್ ಅರೆಸ್ಟ್ ಆದ ವ್ಯಕ್ತಿ. ಶಬಾಷ್ ಬಡ್ಡಿ ಮಗನೇ ಪ್ರಮೋದ್ ಶೆಟ್ಟಿ ನಾಯಕನಟನಾಗಿ ಅಭಿನಯದ ಮೊದಲ ಸಿನಿಮಾ ಆಗಿದೆ.
KMF ನಲ್ಲಿ 20 ಲಕ್ಷಕ್ಕೆ ತಾಂತ್ರಿಕ ಅಧಿಕಾರಿಹುದ್ದೆ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿ ಹಣ ಪಡೆದಿದ್ದ ನಿರ್ಮಾಪಕ ಪ್ರಕಾಶ್ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬವರಿಂದ ಮುಂಗಡವಾಗಿ 10 ಲಕ್ಷ ರೂಪಾಯಿ ಪಡೆದಿದ್ದ.
ಕಳೆದ ಡಿಸೆಂಬರ್ ನಲ್ಲಿ KMF ಗೆ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. KMF ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಆದೇಶ ಪ್ರತಿ ನೀಡುತ್ತಿದ್ದ ಪ್ರಕಾಶ್ ಉದ್ಯೋಗಾಕಾಂಕ್ಷಿಗಳನ್ನು ಮೋಸ ಮಾಡುತ್ತಿದ್ದ.
ಚರಣ್ ರಾಜ್ ನಕಲಿ ಆದೇಶ ಪ್ರತಿ ಕಂಡು KMF ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಐಪಿಸಿ 420 ಅಡಿಯಲ್ಲಿ ನಿರ್ಮಾಪಕ ಪ್ರಕಾಶ್ನ ಬಂಧನವಾಗಿದೆ.
ಈ ರೀತಿ ಐದಾರು ಮಂದಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ.
Be the first to comment