Climax Shooting ನಲ್ಲಿ :‘ಧೀರ ಭಗತ್ ರಾಯ್’ ಚಿತ್ರ!

ಕರ್ಣನ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಕಥೆ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಮತ್ತು ನಾಯಕಿಯಾಗಿ ಸುಚರಿತಾ ಸಹಾಯರಾಜ್ ನಟಿಸುತ್ತಿದ್ದಾರೆ. ಟೀಸರ್ ಮೂಲಕ ಗಮನ ಸೆಳೆದ ಚಿತ್ರತಂಡ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಕೋರ್ಟ್ ಸೀನ್ ಸೆರೆ ಹಿಡಿಯಲಾಗುತ್ತಿದ್ದು, ಇದೇ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

ನಿರ್ದೇಶಕ ಕರ್ಣನ್. ಎಸ್ ಮಾತನಾಡಿ ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಜೀವಾಳ ಆಗಿರುವ ಕೋರ್ಟ್ ಸೀನ್ ಸೆರೆ ಹಿಡಿಯಲಾಗುತ್ತಿದೆ. ಆರು ದಿನಗಳಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಇದೊಂದು ಪೊಲಿಟಿಕಲ್ ಸಿನಿಮಾ. ನಮ್ಮ ನೆಲಮೂಲದ ಕಥೆ ಇದು. ಯಾರೂ ಕೂಡ ಇವತ್ತಿನವರೆಗೆ ಟಚ್ ಮಾಡದ ಸ್ಟೋರಿ ಚಿತ್ರದಲ್ಲಿದೆ. ಇದರಲ್ಲಿ ಭೂ ಸುಧಾರಣೆ ಕಾಯ್ದೆ ಜೊತೆಗೆ ಪ್ರಿವೆಂಶನ್ ಆಫ್ ಎಸ್ ಸಿ ಎಸ್ ಟಿ ಅಲ್ಟ್ರಾಸಿಟಿ ಆ್ಯಕ್ಟ್ 1989 ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇನೆ.

ಈ ಸಿನಿಮಾ ಸಮಾಜದಲ್ಲಿ ತುಂಬಾ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲಿದೆ. ಕಂಟೆಂಟ್ ಗೋಸ್ಕರ ಎರಡು ವರ್ಷ ಎಫರ್ಟ್ ಹಾಕಿದ್ದೇನೆ. ಸಿನಿಮಾ ಕಂಟೆಂಟ್ ನೋಡಿ ಬೇರೆ ಭಾಷೆಯ ವಿತರಕರು ಕೂಡ ಆಫರ್ ನೀಡಿದ್ದಾರೆ. ಹಿಂದಿಯ ಪ್ರತಿಷ್ಠಿತ ಕಂಪನಿ ಕೂಡ ಈ ಸಿನಿಮಾ ಕಂಟೆಂಟ್ ನೋಡಿ ಇಂಪ್ರೆಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರುವ ಸಾಧ್ಯತೆ ಇದೆ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಾಯಕ ನಟ ರಾಕೇಶ್ ದಳವಾಯಿ ಮಾತನಾಡಿ 2014ರಿಂದ ರಂಗಭೂಮಿಯಲ್ಲಿ ಸಕ್ರಿಯನಾಗಿದ್ದೇನೆ. ಚಿತ್ರದಲ್ಲಿ ಲಾಯರ್ ಪಾತ್ರವನ್ನು ಮಾಡುತ್ತಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದೇನೆ. ಕೋರ್ಟ್ ಸೀನ್ ಗಾಗಿ ಸಾಕಷ್ಟು ರಿಹರ್ಸಲ್ ಮಾಡಿದ್ದೇನೆ. ಲಾಯರ್ ಗಳು ಹೇಗೆ ವಾದ ಮಾಡುತ್ತಾರೆ, ಮ್ಯಾನರಿಸಂ ಎಲ್ಲವನ್ನು ನೋಡಿ, ಪ್ರೊಫೆಶನಲ್ ಲಾಯರ್ ಗಳಿಂದ ಒಂದಿಷ್ಟು ತಿಳಿದುಕೊಂಡು ಈ ಪಾತ್ರ ಮಾಡುತ್ತಿದ್ದೇನೆ.

ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಆರು ದಿನದ ಚಿತ್ರೀಕರಣ ಬಾಕಿ ಇದೆ. ಮುಂದಿನ ತಿಂಗಳು ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಮಾರ್ಚ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯೆತೆ ಇದೆ ಎಂದು ತಿಳಿಸಿದ್ರು.

ನಾಯಕಿ ಸುಚರಿತಾ ಸಹಾಯರಾಜ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಚಿತ್ರದಲ್ಲಿ ಸಾವಿತ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಾವಿತ್ರಿ ತುಂಬಾ ಗಟ್ಟಿಗಿತ್ತಿ ಮಹಿಳೆ. ಒಬ್ಬ ಮಹಿಳೆ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಏನು ಬೇಕಿದ್ರು ಸಾಧಿಸಬಹುದು ಎಂಬ ಸ್ಪೂರ್ತಿ ತುಂಬುವ ಮಹಿಳೆ ಪಾತ್ರ.

ಇಂತಹ ಪಾತ್ರವನ್ನು ನೀಡಿದಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತೇನೆ. ಪಾತ್ರಕ್ಕೆ ನನ್ನ ಸಂಪೂರ್ಣ ಎಫರ್ಟ್ ಹಾಕುತ್ತಿದ್ದೇನೆ, ಚಿತ್ರದ ಹಿರಿಯ ಕಲಾವಿದರು ಕೂಡ ನನಗೆ ನಟನೆ ವಿಚಾರದಲ್ಲಿ ತುಂಬಾ ಕಲಿಸಿಕೊಡುತ್ತಿದ್ದಾರೆ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಶರತ್ ಲೋಹಿತಾಶ್ವ ಖಳನಟನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಪ್ರವೀಣ್ ಹಗಡೂರು, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್ ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೇಸರ್ ಹರಿರಾಮ್, ಪಿ ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶ್ರೀ ಓಂ ಸಿನಿ ಎಂಟಟೈನರ್ಸ್ ಹಾಗೂ ವೈಟ್ ಲೋಟಸ್ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ವಿಶ್ವ ಎನ್.ಎಂ ಸಂಕಲನ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!