ಮತ್ತೊಂದು ದೈವಶಕ್ತಿ ಕುರಿತಾದ ಸಿನ್ಮಾ: ಬೆಳ್ಳಿತೆರೆ ಮೇಲೆ ‘ಕರಿ ಹೈದ ಕರಿ ಅಜ್ಜ’ನ ಆಟ ಶುರು!

ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಕರಿ ಹೈದ ಕರಿ ಅಜ್ಜ’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದರಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರ ನಿರ್ವಹಿಸಿದ್ದಾರೆ. ಅಂತರರಾಷ್ಟ್ರೀಯ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷ.

ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಚಿತ್ರೀಕರಣ ಮುಕ್ತಾಯವಾದ ಮಾರನೆಯ ದಿನ ಕೊರಗಜ್ಜ ದೈವಕ್ಕೆ ಕ್ರತಜ್ನತೆ ಹೇಳುವ ದ್ರಷ್ಟಿಯಲ್ಲಿ ‘ನಿನ್ನೆಯಷ್ಟೇ “ಕೊರಗಜ್ಜ ದೈವದ ಕೋಲ ಸೇವೆನೀಡಲಾಯಿತು ಎಂದರು.. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ತನಿಯ ಅಥವ ಕಾಂತಾರೆ ಎನ್ನುವ ಕರಾವಳಿಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥೆ ಉಳ್ಳ ಚಿತ್ರ. ಇದರಲ್ಲಿ ಹಾಲಿವುಡ್ -ಬಾಲಿವುಡ್ ಕೋರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ “ಗುಳಿಗ” ದೈವದ ಪಾತ್ರವಾನ್ನು ನಿಭಾಯಿಸಿದ್ದಾರೆ. ಇದು ಕೊರಗಜ್ಜನ ಜೊತೆಗೆ ಇರುವ ಗುಳಿಗ . ಮಂಗಳೂರಿನ ಬಳಿ ಇರುವ ನೇತ್ರಾವತಿ ನದಿ ತಟದಲ್ಲಿರುವ “ಕಲ್ಲಾಪು ಬೂರ್ದಗೋಳಿ” ಬಳಿ ಕೊರಗಜ್ಜನ ಜೊತೆ ಗುಳಿಗ ದೈವವೂ ಇದೆ. ಈ ಸನ್ನಿವೇಷಕ್ಕಾಗಿ ಗುಳಿಗನ ಪಾತ್ರವನ್ನು ಗುಳಿಗ ನರ್ತನದ ರೀತಿ ತೋರಿಸಲಾಗಿದ್ದು; ಆ ಪಾತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ನ್ರತ್ಯ ಕಲಾವಿದ ಸಂದೀಪ್ ಸೋಪರ್ಕರ್ ಅವರು ಸೂಕ್ತ ಎನಿಸಿತ್ತು.ಅಂದುಕೊಂಡಂತೆ ಅವರ ಅದ್ಭುತ ನರ್ತನ ಚಿತ್ರಕ್ಕೆ ಇನ್ನಿಲ್ಲದ ಕಳೆ ತಂದಿದೆ.

ಈ ಮೊದಲು ಕೊರಗಜ್ಜನ ಬಗ್ಗೆ ಸುಮಾರು 20 ಕ್ಕೂ ಹೆಚ್ಚು ನಿರ್ಮಾಪಕರು ಕಳೆದ 7-8 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು.ಆದರೆ ನಾವು ಸಿನಿಮಾ ಕೆಲಸ ಶುರು ಮಾಡುವ ಮೊದಲು ಕೊರಗಜ್ಜ ದೈವದ ಕೋಲ ನಡೆಸಿ ದೈವದ ಅಪ್ಪಣೆ ಕೇಳಿದೆವು, . ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. 12ನೇ ಶತಮಾನದ ಕಥೆ ಇದಾಗಿದ್ದು, ಚಿತ್ರದಲ್ಲಿ ಬುರ್ದಗೋಳಿ ಉತ್ಪತ್ತಿ ಕಲ್ಲು ಎಂಬ ಪ್ರದೇಶದಲ್ಲಿ ಉದ್ಯಾವರ ಅರಸುಗಳ ಕೈಯಿಂದ ಪಂಜಂದಾಯಿಗೆ ಕೊರಗಜ್ಜನು ಅವಳ ರಾಜ್ಯವನ್ನು ಮರಳಿ ದೊರಕಿಸಿಕೊಡಲು ಇತ್ಯರ್ಥ ಮಾಡುತ್ತಾನೆ. ಅಂತಹ ಕಲ್ಲಾಪು ಬೂರ್ದಗೋಳಿ ಯಲ್ಲಿ ಕೊರಗಜ್ಜ ಮತ್ತು ಗುಳಿಗ ದೈವದ ವಾರ್ಷಿಕ ಕೋಲ ಸೇವೆಯ ದಿನದಂದೇ ಗುಳಿಗ- ಕೊರಗಜ್ಜನ ಪ್ರಥಮ ಭೇಟಿಯ ದ್ರಶ್ಯವನ್ನು ಮೂಲ ಕಥೆಯಲ್ಲಿ ದಾಖಲಾಗಿರುವಂತೆ ಸೋಮೇಶ್ವರದಲ್ಲಿ ಶೂಟ್ ಮಾಡಿದ್ದು ಕಾಕತಾಳಿಯವೋ ಪವಾಡವೋ ತಿಳಿದಿಲ್ಲ..! : ಎಂದರು. ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಈ ಸಿನಿಮಾವನ್ನು ನಾನು ಮಾಡಲಿಲ್ಲ. ಆ ದೈವ ನನ್ನ ಕೈಲಿ ಮಾಡಿಸಿದ್ದಾರೆ. ನಮ್ಮ ಚಿತ್ರದಲ್ಲಿ ಕಳ್ಳು ಮಾರುವ ಮೈರಕ್ಕೆ ಬೈದ್ಯೆದಿ ಪಾತ್ರ ಮುಖ್ಯವಾಗಿದ್ದು, ಈಕೆ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಜನ ಆರಾಧಿಸುತ್ತಾರೆ. ಜನರು ವಿಸ್ಕಿ, ಬ್ರಾಂದಿ, ಕೊರಗಜ್ಜಗೆ ನೀಡುತ್ತಿದ್ದು, ಅಂದಿನ ಕಾಲದಲ್ಲಿ ಇವುಗಳು ಇರಲಿಲ್ಲ. ಕಥೆಗಳಲ್ಲಿ ಕೊರಗಜ್ಜ ಕಳ್ಳು ಸೇವಿಸಲು ಸಾಧ್ಯವಿತ್ತು ಎನ್ನುವುದನ್ನು ಊಹಿಸಿಕೊಳ್ಳಲು ಪುರಾವೆಗಳಿವೆ. ಆದರೆ ವಿಸ್ಕಿ, ಬ್ರಾಂಡಿ. ಸ್ಕಾಚ್ ಮೊದಲಾದ ಮದ್ಯಗಳನ್ನು ಕೊರಗಜ್ಜನಿಗೆ ಯಥೇಚ್ಚವಾಗಿ ಮತ್ತು ಬಹಳ ಮುಖ್ಯ ಭಕ್ಷ್ಯವೆಂಬಂತೆ ಅರ್ಪಿಸುತ್ತಿರುವ ಬಗ್ಗೆ ಕೊರಗ ಜನಾಂಗಕ್ಕೆ ಅತೀವ ಬೇಸರ ವಿದೆ. ನಮ್ಮ ಜನಾಂಗದ ದೈವವನ್ನು ಈ ರೀಯಲ್ಲಿ ಆರಾಧಿಸಬೇಕೆ ಎಂಬ ನೋವು ಅವರಲ್ಲಿ ದಟ್ಟವಾಗಿದೆ.

ನಂತರ ಮಾತನಾಡಿದ ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ ‘ಈ ಚಿತ್ರ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರವನ್ನು ನಾನು ನನ್ನ ಅಸಿಸ್ಟೆಂಟ್ ಜೊತೆಗೆ ಡಿಸ್ಕಸ್ ಮಾಡಿ ಮಾಡಿದ್ದೇನೆ. ಒಳ್ಳೆ ರೀತಿ ಶೂಟಿಂಗ್ ಆಯ್ತು. ಈ ಪಾತ್ರ ಮಾಡಿದ್ದು ಖುಷಿ ಇದ್ದು, ಇದರಲ್ಲಿ ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಒಂದು ರೌಡಿಗಳ ಗುಂಪು ಗಲಾಟೆ ಮಾಡಿ ಎಲ್ಲರಿಗೂ ಜೀವ ಭಯ ನೀಡಿದುದರಿಂದ 2 ದಿನ ಶೂಟಿಂಗ್ ನಿಂತಿತು. ನಂತರ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ವಿದ್ಯಾಧರ್ ಶೆಟ್ಟಿ ಯವರ ಮಧ್ಯಸ್ಥಿಕೆಯಲ್ಲಿ ಮಂಗಳೂರಿನ ಪೊಲೀಸ್ ಕಮಿಷನರ್ ರವರ ಸಹಕಾರದಿಂದ ಶೂಟಿಂಗ್ ನಡೆಸಲಾಯ್ತು. ಆದರೆ ಎರಡು ದಿನ ಶೂಟಿಂಗ್ ನಡೆಯದ ಕಾರಣ ನಿರ್ಮಾಪಕರಿಗೆ ನಿರ್ಮಾಪಕರಿಗೆ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಯ್ತು.

. ಕೊರಗಜ್ಜನ ಸಾಕು ತಾಯಿ ಪಾತ್ರ ನಿರ್ವಹಿಸಿರುವ ನಟಿ ಶ್ರುತಿ ಮಾತನಾಡಿ, ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಶವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಮೈರಕ್ಕೆ ಬೈದ್ಯೆದಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದ ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ. ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ರವಿವರ್ಮನ ಪೇಂಟಿಂಗ್ ತರಹ ಇದೆ. ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಮೈರಕ್ಕೆ ಬೈದ್ಯೆದಿ ಪಾತ್ರ ಕೊರಗಜ್ಜ ಸಾಕು ತಾಯಿ. ಇದರಲ್ಲಿ ಕೊರಗಜ್ಜಗೆ ತನಿಯಾ/ ಕಾಂತಾರೆ ಎಂಬ ಹೆಸರಿದೆ. ನಾನು ಕಳ್ಳು ಮಾರುವವಳ ಪಾತ್ರ ಮಾಡುತ್ತಿರುತ್ತೇನೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ನಮ್ಮ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ. ನಾನು ಈ ಸಿನಿಮಾ ಮಾಡಿದ್ದು ಧನ್ಯತಾ ಭಾವ ಇದೆ’ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೋರ್ವ ನಟಿ ಭವ್ಯ ‘ಈ ಚಿತ್ರದಲ್ಲಿ ನಾನು ವಿಷೇಶವಾದ ಪಾತ್ರ ಮಾಡಿದ್ದು, ಶೂಟಿಂಗ್ ಮಾಡುವಾಗ ಹಲವಾರು ಮಿರಾಕಲ್ ಗಳು ಆಗ್ತಾ ಇತ್ತು. ನದಿ ಹತ್ತಿರ ಶೂಟಿಂಗ್ ಆಗುತ್ತಿರಬೇಕಾದರೆ, ನದಿಯ ಮತ್ತೊಂದು ಮಗ್ಗುಲಲ್ಲಿ ಪಾಲಿಟಿಕಲ್ ಪಾರ್ಟಿ ಒಂದ ಜೋರಾದ ಭಾಷಣ, ಅವರ ಫ಼ೋಕಸ್ ಲೈಟ್, ಸನ್ನಿವೇಷಕ್ಕೆ ಬೇಕಾದ ಕಪ್ಪು ದೋಣಿಗಾಗಿ ಹುಡುಕಾಟ ಎಲ್ಲಾ ಅಡೆತಡೆಗಳ ನಡುವೆ ಶೂಟಿಂಗ್ ಆಗುವುದೇ ದುಸ್ತರ ಎನಿಸಿತ್ತು. ಸೀನ್ ನಲ್ಲಿ ನದಿ ನೀರಿನ ಪ್ರತಿಬಿಂಬದ ಶಾಟ್ ಬೇಕಾಗಿತ್ತು ಆದ್ರೆ ನದಿಯಲ್ಲಿ ಏಳುತ್ತಿದ್ದ ತೀವ್ರ ವಾದ ಅಲೆಗಳಿಂದ ಪ್ರತಿಬಿಂಬ ದೊರೆಯುವುದು ಅಸಾಧ್ಯ ವೆನಿಸಿತ್ತು. ಆದರೆ ಟೇಕ್ ತೆಗೆದುಕೊಳ್ಳುವ ವೇಳೆಗೆ ರಾಜಕೀಯ್ಯ ವ್ಯಕ್ತಿಗಳ ಭಾಷಣ ನಿಂತಿತು, ಅವರ ಫ಼ೋಕಸ್ ಲೈಟ್ ಆಫ಼್ ಆಯ್ತು, ನಿರ್ದೇಶಕರು ಬಯಸುತ್ತಿದ್ದ ಕಪ್ಪು ಬಣ್ಣದ ಹಳೇ ದೋಣಿ ಮುಖಾಂತರ ನದಿಯಲ್ಲಿ ಒಬ್ಬಾತ ಶೂಟಿಂಗ್ ನೋಡಲು ಬಂದಾಗ, ಅದೇ ರ ದೋಣಿಯನ್ನು ಸೀನ್ ನಲ್ಲಿ ಬಳಸಿಕೊಳ್ಲಲಾಯಿತು. ಅಲ್ಲದೆ ಟೇಕ್ ತೆಗೆದುಕೊಳ್ಲಬೇಕೆಂದಾಗ ನದಿಯಲ್ಲಿ ಅಲೆಗಳೂ ನಿಂತು ಅಧ್ಭುತವಾದ ಪ್ರತಿಬಿಂಬದ ಶಾಟ್ ಕೂಡಾ ದೊರೆಯಿತು. ಎಂದು ತಮಗಾದ ಅನುಭವ ಹಂಚಿಕೊಂಡರು.

ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ‘ತುಳು ನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಇಡೇರಿದೆ. ಸೋಮೇಶ್ವರ, ಉಲ್ಲಾಳ, ಮಡಂತ್ಯಾರ್, ಪೇರೂರು, ಅಡ್ಯಾರ್, ಎರ್ಮಾಯ್ ,ಸಾರಪಲ್ಲ, ಅರ್ಕುಳ, ಮಂಗಳೂರು ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದ್ದು ಇದೀಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರವನ್ನು ಮೇ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎನ್ನುವರು. ಚಿತ್ರದಲ್ಲಿ ಪ್ರಮುಖ ಪ್ರಾತ್ರವೊಂದರಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ. ನಾಯಕನಾಗಿ ಭರತ್ ಸೂರ್ಯ ನಟನೆ ಮಾಡಿದ್ದು, ಇವರು ಸಿನಿಮಾ ಶೂಟಿಂಗ್ ಮುಗಿಯುವ ವರೆಗೆ ಕಾಲಿಗೆ ಚಪ್ಪಲಿ ಹಾಕಿಲ್ಲವಂತೆ. ಇನ್ನು ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ನಲ್ಲಿ ಈ ನಿರ್ಮಾಣ ಮಾಡಲಾಗುತ್ತಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!