Vishunuvardhan ಜ.29ಕ್ಕೆ ವಿಷ್ಣು ಸ್ಮಾರಕ ಉದ್ಘಾಟನೆ

ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಜ.29 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ವಿಷ್ಣುವರ್ಧನ್‌ ಅವರು ನಿಧನರಾದ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣ ಪೂರ್ಣಗೊಂಡು ಈಗ ಉದ್ಘಾಟನೆಗೆ ಸಿದ್ಧವಾಗಿದೆ.

ಮೈಸೂರು ತಾಲೂಕು ಹಾಲಾಳು ಗ್ರಾಮದಲ್ಲಿ ಸರ್ಕಾರ ನೀಡಿರುವ 5 ಎಕರೆ ಪ್ರದೇಶದ ಪೈಕಿ 3 ಎಕರೆಯಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಇದರಲ್ಲಿ ಸುಮಾರು 600 ಛಾಯಾಚಿತ್ರಗಳ ಪ್ರದರ್ಶನವಿದೆ. ವಿಷ್ಣುವರ್ಧನ್ ಅವರು ಬಳಕೆ ಮಾಡುತ್ತಿದ್ದ ವಸ್ತುಗಳ ಪ್ರದರ್ಶನವೂ ಇರಲಿದೆ.

ಸ್ಮಾರಕದ ಆವರಣದಲ್ಲಿ ವಿಭೂತಿ ಧರಿಸಿರುವ ಸುಮಾರು 7 ಅಡಿ ಎತ್ತರದ ವಿಷ್ಣುವರ್ಧನ್‌ ಅವರ ಪ್ರತಿಮೆ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಅಂದು ಅನಾವರಣಗೊಳಿಸಲಾಗುವುದು. ಸ್ಮಾರಕದಲ್ಲಿ ಒಂದು ಸಭಾಂಗಣ ನಿರ್ಮಿಸಲಾಗಿದ್ದು, ಇಲ್ಲಿ ರಂಗ ತರಬೇತಿ, ಸಿನಿಮಾ ಕಾರ್ಯಾಗಾರ ಆಯೋಜಿಸಲಾಗುವುದು. ಈ ಸಭಾಂಗಣದ ಜೊತೆಗೆ ಎರಡು ಕೊಠಡಿ ಮತ್ತು ಕಚೇರಿ ಇರಲಿದೆ ಎಂದು ನಟ ಅನಿರುದ್ಧ ಹೇಳಿದ್ದಾರೆ.

ಭೂಮಿಯ ವ್ಯಾಜ್ಯ, ರೈತರ ಪ್ರತಿಭಟನೆ ನಡುವೆ ಭಾರತಿ ವಿಷ್ಣುವರ್ಧನ್‌ ಮತ್ತು ಅಳಿಯ ಅನಿರುದ್ಧ ಅವರ ಹೋರಾಟದ ಫಲವಾಗಿ ಸರ್ಕಾರದ ನೆರವಿನೊಂದಿಗೆ ಕೊನೆಗೂ ಸ್ಮಾರಕ ಉದ್ಘಾಟನೆಗೆ ಸಿದ್ಧವಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!