Lovebirds ಲವ್ ಬರ್ಡ್ಸ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಲವ್ ಬರ್ಡ್ಸ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಲವ್ ಬರ್ಡ್ಸ್ ಚಿತ್ರದಲ್ಲಿ ಲವ್ ಇದೆ. ಮಿಲನ ನಾಗರಾಜ್ ಜೊತೆಗೆ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕೂಡ ಇದ್ದಾರೆ. ಅಲ್ಲಿಗೆ ರಿಯಲ್ ಜೋಡಿ ಈಗ ಮತ್ತೊಮ್ಮೆ ತೆರೆ ಮೇಲೆ ಬರೋಕೆ ರೆಡಿ ಆಗಿದೆ.

ಲವ್ ಬರ್ಡ್ಸ್ ಸಿನಿಮಾದಲ್ಲಿ ಮಿಲನಾ ನಾಗರಾಜ್ ಲುಕ್ ಬದಲಾಗಿದೆ. ಚಿತ್ರ ಕಲಾವಿದೆಯ ಪಾತ್ರ ಮಿಲನಾ ಇಲ್ಲಿ ಮಾಡ್ತಿದ್ದಾರೆ ಎಂದು ಹೇಳಲಾಗಿದೆ. ಮಿಲನಾ ನಾಗರಾಜ್ ಈ ಚಿತ್ರದಲ್ಲಿ ಪೂಜಾ ಹೆಸರಿನ ಪಾತ್ರ ಮಾಡಿದ್ದಾರೆ.

ಪಿ.ಸಿ.ಶೇಖರ್ ಲವ್ ಬರ್ಡ್ಸ್ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಪಿ.ಸಿ.ಶೇಖರ್ ಅವರ ಈ ಮೊದಲಿನ ಸಿನಿಮಾಗಳಿಗೂ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದರು.

ಕಡ್ಡಿಪುಡಿ ಚಿತ್ರ ಖ್ಯಾತಿಯ ನಟ ಎಂ.ಚಂದ್ರು ಈ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಸದ್ಯಕ್ಕೆ ಇಷ್ಟು ಮಾಹಿತಿ ಹೊರ ಬಿದ್ದಿದೆ. ಸನಾಯಕನ ಫಸ್ಟ್ ಲುಕ್ ಹೇಗಿರುತ್ತದೆ ಎನ್ನುವ ಕುತೂಹಲ ಉಂಟಾಗಿದೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!