ಹೌದು, ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ನಟ ಗಣೇಶ್ ಸಂಬಂಧಿಗಳಾಗಬೇಕಂತೆ. ಇದುವರೆಗೂ ಈ ವಿಷಯ ಈ ಉಭಯ ತಾರೆಯರಿಗೆ ಗೊತ್ತಿರಲಿಲ್ಲ. ಆದರೆ, ಸುದೀರ್ಘ ಮಾತುಕತೆಯ ಬಳಿಕ ತಾವು ರಿಲೆಟಿವ್ಸ್ ಅನ್ನೋದು ಸುದೀಪ್ ಅವರಿಗೆ ಗೊತ್ತಾಗಿದೆ. ಆದರೆ, ಇದು ಯಾವ ರೀತಿಯಲ್ಲಿ ಸಂಬಂಧ ಎನ್ನವುದನ್ನು ನೀವೇ ಊಹಿಸಿ ಎಂದಿದ್ದಾರೆ ಕಿಚ್ಚ ಸುದೀಪ್.
ಈ ಸಂತಸದ ವಿಚಾರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅವರು, ಗಣೇಶ್ ನಮ್ಮ ಸಂಬಂಧಿಯಾಗಬೇಕು. ಈಗ ನಮ್ಮ ಮನೆಯಲ್ಲಿ ಬಂಗಾರ ಇದೆ, ಐ ಆ್ಯಮ್ ರಿಚ್ ಮ್ಯಾನ್ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
Be the first to comment