kgf3 ಕೆಜಿಎಫ್ 3 ಚಿತ್ರ ಸೆಟ್ಟೇರುವುದು ಯಾವಾಗ?

ಕೆಜಿಎಫ್ 3 ಚಿತ್ರ 2025ರಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.

ಹೊಂಬಾಳೆ ಫಿಲ್ಮ್ಸ್​​​ನ ವಿಜಯ್ ಕಿರಗಂದೂರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕೆಜಿಎಫ್ 3 ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಇನ್ನೂ ಆರಂಭ ಆಗಿಲ್ಲ. 2025ರಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಕೆಜಿಎಫ್​ ಸೀರಿಸ್​ನಲ್ಲಿ ಐದು ಪಾರ್ಟ್​​ಗಳು ಬರಬಹುದು. ಜೇಮ್ಸ್​ ಬಾಂಡ್ ಸಿನಿಮಾಗಳಲ್ಲಿ ಬಾಂಡ್ ಪಾತ್ರವನ್ನು ಬೇರೆಯವರು ಮಾಡಿದ್ದರು. ಅದೇ ರೀತಿ ‘ಕೆಜಿಎಫ್​’ ಸೀರಿಸ್​ನ ರಾಕಿಭಾಯ್ ಪಾತ್ರವನ್ನು ಬೇರೆಯವರು ಮಾಡಬಹುದು. ಇಲ್ಲಿ ಹೀರೋಗಳು ಬದಲಾಗುತ್ತಿರುತ್ತಾರೆ’ ಎಂದಿದ್ದಾರೆ ವಿಜಯ್ ಕಿರಗಂದೂರು.

ಪ್ರಶಾಂತ್ ನೀಲ್ ಅವರು ‘ಸಲಾರ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರದ ಬಳಿಕ ಪ್ರಶಾಂತ್ ನೀಲ್ ಜೂ.ಎನ್​ಟಿಆರ್​​ ಜತೆಗಿನ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಬಳಿಕ ‘ಕೆಜಿಎಫ್ 3’ ಕೆಲಸದಲ್ಲಿ ಪ್ರಶಾಂತ್ ನೀಲ್ ಕೆಲಸ ಮಾಡಲಿದ್ದಾರೆ.

‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ನಲ್ಲಿ ರಾಕಿ (ಯಶ್​) ಮೃತಪಡುತ್ತಾನೆ. ಆತ ಭಾರತದಲ್ಲಿ ಮಾಡಿದ ಕೃತ್ಯಗಳ ಲೆಕ್ಕವಷ್ಟೇ ಸರ್ಕಾರಕ್ಕೆ ಸಿಕ್ಕಿರುತ್ತದೆ. ವಿದೇಶದಲ್ಲೂ ಆತ ಒಂದಷ್ಟು ಕೃತ್ಯಗಳನ್ನು ಮಾಡಿದ್ದ. ‘ಕೆಜಿಎಫ್ 3’ ಚಿತ್ರದಲ್ಲಿ ಈ ವಿಚಾರ ಇರಲಿದೆ ಎನ್ನಲಾಗುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!