ಆರಂಭದಿಂದಲೂ ಜೋಗಿ ಪ್ರೇಮ್ ಹಾಗೂ ದ್ರುವ ಸರ್ಜಾ ಕಾಂಬಿನೇಶನ್ನಲ್ಲಿ ತಯಾರಾಗುತ್ತಿರುವ ಕೆಡಿ ಚಿತ್ರವು ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದೆ. ಇವರಿಬ್ಬರೂ ಮೊದಲಬಾರಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲಗಳು ಗರಿಗೆದರಿದ್ದವು. ಅದರಂತೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಟೈಟಲ್ ಟೀಸರ್ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಹಾಗೂ ಅವರ ವಿಭಿನ್ನ ಗೆಟಪ್ ಸೌಂಡ್ ಮಾಡ್ತಿದೆ.
೧೯೭೦ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜಘಟನೆಯನ್ನಾಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ಕೆಡಿ ನಾಯಕನ ನಿಕ್ನೇಮ್. ವಿಶೇಷವಾಗಿ ಬಾಲಿವುಡ್ ನಟ ಸಂಜಯ್ದತ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ನಿರ್ದೇಶಕ ಪೇಮ್, ಅಣ್ಣಯ್ಯಪ್ಪ ಎಂಟರ್ಸ್ ಕೆ.ಡಿ. ವಿಂಟೇಜ್ ಬ್ಯಾಟಲ್ ಫೀಲ್ಡ್ ಎಂಬ ಪೋಸ್ಟ್ ಹಾಕಿ ಕೆಡಿ ಚಿತ್ರದ ಮತ್ತೊಂದು ಪಾತ್ರವನ್ನು ಹೊಸ ವರ್ಷಕ್ಕೆ ಪರಿಚಯಿಸುವುದಾಗಿ ಹೇಳಿದ್ದರು. ಅಣ್ಣಯ್ಯಪ್ಪನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದು, ಅವರ ವಿಭಿನ್ನ ಗೆಟಪ್ ಇರುವ ಲುಕ್ಕನ್ನು ನಿರ್ದೇಶಕ ಪ್ರೇಮ್ ಬಿಡುಗಡೆ ಮಾಡಿದ್ದಾರೆ,
In war, the "crazy" ones are never forgotten. Welcoming Crazy Star V Ravichandran sir alias Annayyappa to KD's war!
Wish you a Happy New Year! May 2023 bring you happiness and peace.
Shower us with your blessings like you always do🙏#Ravichandran @DhruvaSarja @KvnProductions pic.twitter.com/jedAWiNwc9
— PREM❣️S (@directorprems) January 1, 2023
ರೆಟ್ರೋ ಸ್ಟೈಲ್ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ದ್ರುವ ಸರ್ಜಾ ರೌಡಿಯಾಗಿ ನಟಿಸುತ್ತಿದ್ದಾರೆ. ಈ ಕೆಡಿಯ ಜತೆ ಇನ್ನಷ್ಟು ಕೆಡಿಗಳು ಸಹ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಮೂಲಕ ನಿಶಾವೆಂಕಟ್ ಕೋನಂಕಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸುಪ್ರೀತ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕನ್ನಡ, ತೆಲಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಕೆಡಿ, ಜೋಗಿಪ್ರೇಮ್ ನಿರ್ದೇಶನದ ೯ನೇ ಚಿತ್ರವೂ ಆಗಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದೆ. 

Be the first to comment