ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ವೀರ ಕಂಬಳ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ.
ವೀರ ಕಂಬಳ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದಲ್ಲಿ ವೀರೇಂದ್ರ ಹೆಗ್ಗಡೆ ಅವರು ಪಾಲ್ಗೊಂಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರಿಗೆ ಮೇಕಪ್ ಹಚ್ಚುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.
ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರ ಕಂಬಳ ಸಿನಿಮಾ ತಯಾರಾಗುತ್ತಿದೆ.
ವೀರ ಕಂಬಳ ಚಿತ್ರದಲ್ಲಿ ಕಂಬಳ ಕೋಣ ಓಟಗಾರ ಶ್ರೀನಿವಾಸ್ ಗೌಡ ಅಭಿನಯಿಸಲಿದ್ದಾರೆ. ಈ ಚಿತ್ರವು ಹಲವು ವಿಶೇಷತೆಗಳಿಗಳಿಂದ ಕೂಡಿದೆ ಎಂದು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.
ಸ್ವರಾಜ್ ಶೆಟ್ಟಿ ಕಂಬಳದ ಕೋಣ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್, ರವಿಶಂಕರ್, ರಾಧಿಕಾ ಚೇತನ್, ನವೀನ್ ಪಡೀಲ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾದಲ್ಲಿ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.
ವೀರ ಕಂಬಳ ಸಿನಿಮಾವೂ ಕನ್ನಡ, ತುಳು ಸೇರಿದಂತೆ ಇತರೆ ಭಾಷೆಗಳಲ್ಲಿ ಮೂಡಿ ಬರಲಿದೆ ಎನ್ನಲಾಗಿದೆ. ಕಂಬಳ ಕ್ರೀಡೆ ಹಿನ್ನೆಲೆ ಆಧಾರಿತ ಸಿನಿಮಾ ಇದಾಗಿದೆ.
7 ವರ್ಷ ಸಂಶೋಧನೆ ನಡೆಸಿ ಚಿತ್ರ ನಿರ್ಮಿಸಲಾಗುತ್ತಿದೆ. ಸಿನಿಮಾಗೆ ಅರುಣ್ ರೈ ತೋಡಾರ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಮೂಲಕ ತುಳು ನಾಡಿನ ಭಾಷೆ, ಸಂಸ್ಕೃತಿ ಜಗತ್ತಿಗೆ ಪಸರಿಸುವ ಯತ್ನ ನಡೆದಿದೆ.
__

Be the first to comment