ಟಾಲಿವುಡ್ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಶೀಘ್ರ ಮದುವೆ ಆಗಲಿದ್ದಾರೆ.
ಟ್ವೀಟ್ ಮೂಲಕ ನರೇಶ್ ಅವರು ʻʻಶೀಘ್ರದಲ್ಲೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಪವಿತ್ರಾ ಲೋಕೇಶ್ ಅವರಿಗೆ ಲಿಪ್ ಕಿಸ್ ಕೊಟ್ಟಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಾಲಿವುಡ್ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಈ ಹಿಂದೆ ಆರೋಪಿಸಿದ್ದರು. ಇಬ್ಬರೂ ಮೈಸೂರಿನ ಹೋಟೆಲ್ವೊಂದರಲ್ಲಿ ರಮ್ಯಾ ರಘುಪತಿ ಕೈಗೆ ಸಿಕ್ಕಿ ಬಿದ್ದಿದ್ದರು.
ಬಳಿಕ ತಾವಿಬ್ಬರೂ ನಟಿಸಿದ ಚಿತ್ರದ ಕುರಿತು ನರೇಶ್ ಮಾತನಾಡುವಾಗ ಪವಿತ್ರಾ ಲೋಕೇಶ್ ಅವರ ಭುಜದ ಮೇಲೆ ಕೈ ಹಾಕಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದನ್ನು ನೋಡಿ ನೆಟ್ಟಿಗರು ಇಬ್ಬರೂ ರಿಲೇಷನ್ಶಿಪ್ನಲ್ಲಿ ಇದ್ದ ಹಾಗಿದೆ ಎಂದು ಕಮೆಂಟ್ ಮಾಡಿದ್ದರು.
___





Be the first to comment