ನೆನಪಿರಲಿ ಪ್ರೇಮ್ , ಸಪ್ತಮಿಗೌಡ ಅವರಿಗೆ ‘ಫ್ಲೆಮಿಂಗೋ ಪ್ರಶಸ್ತಿ’!

ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ಕಲಾವಿದ, ತಂತ್ರಜ್ಞರನ್ನು ಕೊಡುಗೆಯಾಗಿ ನೀಡಿದ ಫ್ಲೆಮಿಂಗೋ ಸೆಲಬ್ರಟೀಸ್ ವರ್ಲ್ಡ್ ಸಂಸ್ಥೆ ಈಗ ದಶಕದ ಸಂಭ್ರಮದಲ್ಲಿದೆ. ಯುವನಟ ದವನ್ ಸೋಹಾ ಅವರ ಸಾರಥ್ಯದಲ್ಲಿ ಬೆಳೆದುಬಂದಿರುವ ಈ ಸಂಸ್ಥೆಯಲ್ಲಿ ಕನ್ನಡದ ಹಲವಾರು ಹಿರಿಯರು ಕೆಲಸ ಮಾಡಿದ್ದಾರೆ. ಬೂದಾಳು ಕೃಷ್ಣಮೂರ್ತಿ, ರೇಖಾದಾಸ್, ಸರಿಗಮವಿಜಿ, ಆರ್.ಟಿ.ರಮಾ, ಮೋಹನ್ ಮುಂತಾದವರು ಇಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ ಸೋಮವಾರ ಈ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ರಾಜಾಜಿನಗರದಲ್ಲಿರುವ ಸಂಸ್ಥೆಯ ಆವರಣದಲ್ಲಿ ನಡೆಯಿತು. ಪ್ರೇಮಂ ಪೂಜ್ಯಂ ನಟ ನೆನಪಿರಲಿ ಪ್ರೇಮ್ ಹಾಗೂ ಕಾಂತಾರಾ ಖ್ಯಾತಿಯ ಸಪ್ತಮಿಗೌಡ ಅವರಿಗೆ ವರ್ಷದ ಸಾಧಕನಟ, ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ೨೦೨೩ರ ಸೆಲಬ್ರಟಿ ಕ್ಯಾಲೆಂಡರ್ ನ್ನು ಸಹ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ದವನ್ ಸೋಹಾ, ಹತ್ತು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ, ನಮ್ಮಲ್ಲಿ ಅಭಿನಯ, ನೃತ್ಯ ಸೇರಿದಂತೆ ಹಲವಾರು ವಿಭಾಗದಲ್ಲಿ ತರಬೇತಿಯನ್ನು ನೀಡಲಾಗುತ್ತದೆ, ಈವರೆಗೆ ನಮ್ಮಲ್ಲಿ ಕಲಿತ ನೂರಾರು ಪ್ರತಿಭೆಗಳು ಚಿತ್ರರಂಗ, ಕಿರುತೆರೆ ಯಲ್ಲಿ ಕೆಲಸ ಮಾಡುತ್ತಿದ್ದಾರೆ, ೨೦೧೫ರಿಂದ ನಾವು ಚಿತ್ರರಂಗದ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದಂಥ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಈ ವರ್ಷ ಅದ್ದೂರಿ ಸಮಾರಂಭ ಆಯೋಜಿಸಲಾಗಲಿಲ್ಲ, ಹಾಗಾಗಿ ಸಾಧಕರ ಪ್ರಶಸ್ತಿಯನ್ನು ಮಾತ್ರ ಈ ವೇದಿಕೆಯಲ್ಲಿ ನೀಡಿದ್ದೇವೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಿನ್ಸಿಪಾಲ್ ಶ್ರೀಮತಿ ಭವ್ಯ ಕೂಡ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!