ಮಾರ್ಟಿನ್ ಗೆ ಭರ್ಜರಿ ಕ್ಲೈಮ್ಯಾಕ್ಸ್

ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಸಾಹಸ ದೃಶ್ಯಗಳನ್ನು ಭರ್ಜರಿಯಾಗಿಯೇ ಮಾಡಲಾಗಿದೆ.

ಚಿತ್ರದ ಮಹತ್ವದ ಸಾಹಸ ದೃಶ್ಯಕ್ಕೆ ಭಾರೀ ಸಸೀನ್ ಗಳನ್ನು ಪ್ಲಾನ್ ಮಾಡಲಾಗಿದೆ. ಚಿತ್ರದ ಕಟ್ಟಕಡೆಯ ದೃಶ್ಯಕ್ಕಾಗಿಯೇ ಮೂವರು ಸಾಹಸ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ.

ಮಾರ್ಟಿನ್ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ರವಿ ವರ್ಮಾ, ರಾಮ್ ಮತ್ತು ಲಕ್ಷ್ಮಣ ಹೀಗೆ ಮೂವರು ಸಾಹಸ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್, ಆಯಕ್ಷನ್ ಮಾಸ್ಟರ್ಸ್ ರವಿ ವರ್ಮಾ, ರಾಮ್ ಲಕ್ಷ್ಮಣ ಇರೋ ಫೋಟೋ ಕೂಡ ಹೊರ ಬಿದ್ದಿದೆ.

ಸಾಹಸ ನಿರ್ದೇಶಕ ರವಿ ವರ್ಮ ಈ ಚಿತ್ರಕ್ಕೆ ಚೇಜ್ ದೃಶ್ಯ ಕಂಪೋಜ್ ಮಾಡಿದ್ದಾರೆ. ರಾಮ-ಲಕ್ಷ್ಮಣ ಚಿತ್ರದ ಬೇರೆ ದೃಶ್ಯಗಳನ್ನು ತೆಗೆದಿದ್ದಾರೆ. ಈಗಾಗಲೇ ಈ ಚಿತ್ರದ ಸಾಹಸ ದೃಶ್ಯದ ಕೆಲಸ ಪೂರ್ಣಗೊಂಡಿದೆ ಎಂದು ಸಾಹಸ ನಿರ್ದೇಶಕ ರವಿ ವರ್ಮಾ ಹೇಳಿದ್ದಾರೆ.

ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ನಿರೀಕ್ಷೆ ದಿನೇ ದಿನೇ ಹೆಚ್ಚುತ್ತಿದೆ. ಪೊಗರು ಸಿನಿಮಾ ಆದ್ಮೇಲೆ ಧ್ರುವ ಸರ್ಜಾ ಈ ಮಾರ್ಟಿನ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಧ್ರುವ ಸರ್ಜಾ ಮತ್ತೊಂದು ಮಾಸ್ ಚಿತ್ರ ನೀಡಲಿದ್ದಾರೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!