ಯಕ್ಷಗಾನ ಕಲಾವಿದನ ಬದುಕಿನ ಚಿತ್ರಣ “ದಿ ಬೆಸ್ಟ್ ಆಕ್ಟರ್”

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ಆಸಕ್ತಿ ಮಾಡುತ್ತಿದೆ. ಒಂದು ಕಿರುಚಿತ್ರವು ಅಲ್ಲದ ಅತ್ತ ಕಮರ್ಷಿಯಲ್ ಚಿತ್ರವು ಅಲ್ಲದ ಬ್ರಿಡ್ಜ್ ಸಿನಿಮಾ ರೀತಿ ಹೊಸ ಪ್ರಯೋಗವನ್ನು ನಾಗರಾಜ ಸೋಮಯಾಜಿ ಮತ್ತು ಅವರ ತಂಡ ಮಾಡಿದೆ. ದಿ ಬೆಸ್ಟ್ ಆಕ್ಟರ್ ಎಂಬ ಹೆಸರಿನ ಈ ಚಿತ್ರ 43 ನಿಮಿಷ ಅವಧಿಯಾಗಿದ್ದು, ಒಬ್ಬ ಯಕ್ಷಗಾನ ಕಲಾವಿದನ ಬಣ್ಣದ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ. ಕುಂದಾಪುರ ಹಾಗೂ ಸಾಲಿಗ್ರಾಮದಂತಹ ಸ್ಥಳಗಳಲ್ಲಿ 9 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.

ಖ್ಯಾತಿಯ ಆದರ್ಶ ಈಶ್ವರಪ್ಪ ಹಾಗೂ ನಟ ಸಂಚಾರಿ ವಿಜಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರ್ಜುನ ರಾಮು, ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಎಸ್.ಕೆ. ರಾವ್, ಕ್ಯಾಮಾರಾ ವರ್ಕ್ ನಿಭಾಯಿಸಿದ್ದಾರೆ. ಕರಾವಳಿ ರಂಗಭೂಮಿ ಪ್ರತಿಭೆ ಮಾಧವ ಕಾರ್ಕಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಾನಾಡಿದ ಚಲನಚಿತ್ರ ನಿರ್ದೇಶಕ ನಾಗರಾಜ ಸೋಮಯಾಜಿ ಹಲವಾರು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರ ನಿರ್ದೇಶಿಸಿದ್ದೇನೆ ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುವ ಯೋಜನೆಯೂ ಇದೆ.

ಈ ಚಿತ್ರದಲ್ಲಿ ಮನರಂಜನೆಯ ಜೊತೆಗೆ ನೇಟಿವಿಟಿಯ ಅನಾವರಣ ಕೂಡ ಇದೆ. ಈ ಚಿತ್ರವನ್ನು ಮಲ್ಟಿಪ್ಲೆಕ್ಸ್‍ಗಳಲ್ಲಿ ರಿಲೀಸ್ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಈ ಚಿತ್ರಕ್ಕೆ ದಿನೇಶ್ ವೈದ್ಯ ಬಂಡವಾಳ ಹಾಕಿದ್ದಾರೆ. ಕಮರ್ಷಿಯಲ್ ನೀರಿಕ್ಷೆ ಇಟ್ಟುಕೊಂಡು ನಾನು ಈ ಸಿನಿಮಾಗೆ ಬಂಡವಾಳ ಹಾಕಿಲ್ಲ ನಮ್ಮೂರಿನ ಪರಿಸರವನ್ನು ಜನರಿಗೆ ತೋರಿಸುವ ಒಂದು ಸಣ್ಣ ಪ್ರಯತ್ನ ಅಷ್ಟೇ ಎಂದು ಹೇಳಿದರು.

ನಟ ಸಂಚಾರಿ ವಿಜಯ್ ಮಾತಾನಾಡಿ ನಾನು ನಾಗರಾಜು ಇಬ್ಬರು ಸಂಚಾರಿ ಬಳಗದಲ್ಲಿ ಹಲವಾರು ವರ್ಷ ಕೆಲಸ ಮಾಡಿದ್ದೇವೆ. ಗೆಳೆಯನಿಗಾಗಿ ನಾನು ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೇನೆ. ಒಬ್ಬ ಕಲಾವಿದನ ಬದುಕಿನ ಚಿತ್ರಣ ಇದರಲ್ಲಿದೆ. ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು. ಛಾಯಾಗ್ರಾಹಕ ಎಸ್.ಕೆ.ರಾವ್ ಮಾತಾನಾಡಿ ಈ ಹಿಂದೆ ಎಟಿಎಂ, ನೂರುಂದು ನೆನಪು ಚಿತ್ರಗಳಿಗೆ ವರ್ಕ್ ಮಾಡಿದ್ದೆ. ಇದು ನನ್ನ ಮೂರನೇ ಸಿನಿಮಾ ಎಂದು ಹೇಳಿದರು.

This Article Has 2 Comments
  1. Pingback: Buy Sex Toys Online

  2. Pingback: sex and the city 2 cast

Leave a Reply

Your email address will not be published. Required fields are marked *

Translate »
error: Content is protected !!