veda ವೇದ ಹಾಡು ರಿಲೀಸ್

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ‘ವೇದ’ ಚಿತ್ರದ ‘ಜುಂಜಪ್ಪ’ ಆಡಿಯೋವನ್ನು ಬಿಡುಗಡೆ ಮಾಡಲಾಯಿತು.

ಚಿತ್ರದುರ್ಗದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಗುರುವಾರ ರಾತ್ರಿ ಆಡಿಯೋವನ್ನು ಬಿಡುಗಡೆ ಮಾಡಲಾಯಿತು.

ನಟ ಸುದೀಪ್‌ ಅವರು ಹಾಡನ್ನು ಬಿಡುಗಡೆ ಮಾಡಿದರು. ‘ಅಕ್ಕ ಬಾ ರಕ್ಕು ಬರುವನ ಜುಂಜಪ್ಪನ, ತಂಗಿ ಬಾ ಕರೆದು ಬರುವೆನಾ.’ ಎಂಬ ಹಾಡಿಗೆ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಅಪಾರ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ ಇದು. ಇದು ನಮ್ಮ ಸಿನಿಮಾ ಆಗಿದ್ದು, ಯಶಸ್ಸು ಕಾಣಬೇಕು’ ಎಂದು ನಟ ಕಿಚ್ಚ ಸುದೀಪ್ ಕೋರಿದರು.

‘ಶಿವರಾಜ್ ಕುಮಾರ್ ಇನ್ನೂ 29ರ ಯುವಕನ ರೀತಿಯಲ್ಲಿ ನೃತ್ಯ ಮಾಡುತ್ತಿದ್ದಾರೆ. ಶಿವಣ್ಣ ಅವರ ಡಾನ್ಸ್ ನೋಡಿ ನನಗೂ ಹುಮ್ಮಸ್ಸು ಮೂಡಿದೆ ಎಂದು ಹೇಳಿದರು.

ನಟ ಶಿವರಾಜ್‌ ಕುಮಾರ್‌, ‘ಮೈಲಾರಿ ಚಿತ್ರಕ್ಕೆ ಚಿತ್ರದುರ್ಗಕ್ಕೆ ಬಂದಿದ್ದೆ. ಇಲ್ಲಿಯೇ ಆಡಿಯೋ ಬಿಡುಗಡೆ ಮಾಡಬೇಕು ಎಂಬ ಅಪೇಕ್ಷೆ ಇತ್ತು. ಹೀಗಾಗಿ ಚಿತ್ರದುರ್ಗ ಆಯ್ಕೆ ಮಾಡಿಕೊಂಡೆವು. ಕಿಚ್ಚ ಸುದೀಪ್ ಅಭಿಮಾನದಿಂದ ಇಲ್ಲಿಗೆ ಬಂದಿದ್ದಾರೆ. ಡಿ. 23ರಂದು ವೇದ ಚಿತ್ರ ಬಿಡುಗಡೆ ಆಗಲಿದೆ. ಸಿನಿಮಾದ ಪೂರ್ಣ ತಂಡ ಇಲ್ಲಿಗೆ ಬಂದಿದೆ. ಎಲ್ಲರೂ ಹರಸಿ’ ಎಂದು ಕೋರಿದರು.

ನಿರ್ದೇಶಕ ಹರ್ಷ, ‘ವೇದ’ ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶ ಇದೆ. ಎಲ್ಲರೂ ಚಿತ್ರವನ್ನು ನೋಡಬೇಕು’ ಎಂದು ವಿನಂತಿ ಮಾಡಿದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!