IMDB ಐಎಂಡಿಬಿ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳು

2022ರಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ 10 ಚಿತ್ರಗಳ ಪಟ್ಟಿಯನ್ನು ಐಎಂಡಿಬಿ (ಇಂಟರ್‌ನೆಟ್‌ ಮೂವಿ ಡಾಟಾಬೇಸ್) ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಕನ್ನಡ, ತೆಲುಗಿನ ಮತ್ತು ತಮಿಳಿನ ತಲಾ ಮೂರು ಚಿತ್ರಗಳು ಸ್ಥಾನ ಪಡೆದಿದ್ದು, ಹಿಂದಿಯ ಒಂದು ಸಿನಿಮಾ ಕಾಣಿಸಿಕೊಂಡಿದೆ.

ರಾಜಮೌಳಿ ಅವರ ‘ಆರ್‌ಆರ್‌ಆರ್‌’ (ರಣಂ ರೌದ್ರಂ ರುಧಿರಂ) ತೆಲುಗು ಸಿನಿಮಾ ಮೊದಲ ಸ್ಥಾನದಲ್ಲಿದ್ದು, ವಿವೇಕ್‌ ಅಗ್ನಿಹೋತ್ರಿ ಅವರ ಹಿಂದಿ ಸಿನಿಮಾ ‘ದಿ ಕಾಶ್ಮೀರ್‌ ಫೈಲ್ಸ್‌’ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಐಎಂಡಿಬಿಯು ತನ್ನ ವೆಬ್‌ಸೈಟ್‌ನಲ್ಲಿ ನೆಟ್ಟಿಗರು ನೀಡುವ ಪ್ರತಿಕ್ರಿಯೆ ಆಧರಿಸಿ ಸಿನಿಮಾಗಳ ಜನಪ್ರಿಯತೆಯನ್ನು ನಿರ್ಧರಿಸುತ್ತದೆ.

ಅಗ್ರ ಹತ್ತು ಜನಪ್ರಿಯ ಸಿನಿಮಾಗಳು
1. ಆರ್‌ಆರ್‌ಆರ್‌ – ತೆಲುಗು (ಟಾಲಿವುಡ್‌)
2. ದಿ ಕಾಶ್ಮೀರ್‌ ಫೈಲ್ಸ್ – ಹಿಂದಿ (ಬಾಲಿವುಡ್‌)
3. ಕೆಜಿಎಫ್‌: ಚಾಪ್ಟರ್‌ 2 – ಕನ್ನಡ (ಸ್ಯಾಂಡಲ್‌ವುಡ್‌)
4. ವಿಕ್ರಂ – ತಮಿಳು (ಕಾಲಿವುಡ್‌)
5.ಕಾಂತಾರ – ಕನ್ನಡ (ಸ್ಯಾಂಡಲ್‌ವುಡ್‌)
6.ರಾಕೆಟ್ರಿ: ದಿ ನಂಬಿ ಎಫೆಕ್ಟ್‌ – ತಮಿಳು (ಕಾಲಿವುಡ್‌)
7.ಮೇಜರ್‌ (ಬಯೋಪಿಕ್‌) – ತೆಲುಗು (ಟಾಲಿವುಡ್‌)
8.ಸೀತಾ ರಾಮಮ್‌ – ತೆಲುಗು (ಟಾಲಿವುಡ್‌)
9.ಪೊನ್ನೀಯನ್‌ ಸೆಲ್ವನ್‌: ಭಾಗ 1 – ತಮಿಳು (ಕಾಲಿವುಡ್‌)
10.777 ಚಾರ್ಲಿ – ಕನ್ನಡ (ಸ್ಯಾಂಡಲ್‌ವುಡ್‌)
__

Be the first to comment

Leave a Reply

Your email address will not be published. Required fields are marked *

Translate »
error: Content is protected !!