ಆರ್‌ಆರ್‌ಆರ್ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನ

ರಾಜಮೌಳಿ ನಿರ್ದೇಶನದ ಆಕ್ಷನ್ ಚಿತ್ರ ‘ಆರ್‌ಆರ್‌ಆರ್’ ಇಂಗ್ಲಿಷ್ ಹೊರತಾದ ಭಾಷಾ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಹಾಲಿವುಡ್ ಫಾರಿನ್ ಪ್ರೆಸ್ ಅಸಅಸೋಸಿಯೇಷನ್, ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನ ಅಧಿಕೃತ ಟ್ವಿಟರ್ ಪುಟದಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿದೆ.

ಪ್ಯಾನ್-ಇಂಡಿಯಾ ಬ್ಲಾಕ್ ಬಸ್ಟರ್ ‘RRR’, , ಕೊರಿಯನ್ ರೊಮ್ಯಾಂಟಿಕ್ ಮಿಸ್ಟರಿ ಚಲನಚಿತ್ರ ‘ಡಿಸಿಷನ್ ಟು ಲೀವ್’, ಜರ್ಮನ್ ಯುದ್ಧ-ವಿರೋಧಿ ಚಿತ್ರ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ಅರ್ಜೆಂಟೀನಾದ ಐತಿಹಾಸಿಕ ‘ಅರ್ಜೆಂಟೀನಾ 1985″ ಮತ್ತು ಫ್ರೆಂಚ್- ಡಚ್ ‘ ಕ್ಲೋಸ್ ‘ ನಾಮನಿರ್ದೇಶನಗೊಂಡ ಚಿತ್ರಗಳು ಆಗಿವೆ.

ತೆಲುಗು ಮೂಲ ಭಾಷೆಯ ಚಲನಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದು, ವಿ. ವಿಜಯೇಂದ್ರ ಪ್ರಸಾದ್ ಸಹ-ಕಥೆಗಾರ ರಾಗಿ ಕೆಲಸ ಮಾಡಿದ್ದಾರೆ. ಇದನ್ನು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ , ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರನ್, ಅಲಿಸನ್ ಡೂಡಿ, ಒಲಿವಿಯಾ ಮೋರಿಸ್ ಮೊದಲಾದ ನಟರು ನಟಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!