ಅಭಿಷೇಕ್ ಜೊತೆ ದಗ್ಗುಭಾಟಿ ನಟನೆ?

ಅಭಿಷೇಕ್ ಅಂಬರೀಷ್ ಮುಂದಿನ ಸಿನಿಮಾದಲ್ಲಿ ರಾಣಾ ದಗ್ಗುಭಾಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಅಭಿಷೇಕ್ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್ ನ ಹೊಸ ಸಿನಿಮಾಗೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಇತ್ತೀಚೆಗೆ ಅಭಿಷೇಕ್, ಮಹೇಶ್ ಜೊತೆಗೆ ರಾಣಾ ದಗ್ಗುಭಾಟಿ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಅಭಿಷೇಕ್‌ ಮುಂದಿನ ಸಿನಿಮಾಗೆ ರಾಣಾ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

`ಕೆಜಿಎಫ್ 2′, ಕಾಂತಾರ ಸಿನಿಮಾದ ನಂತರ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಪರಭಾಷೆಯ ಸ್ಟಾರ್ ನಟರು ಮುಂದಾಗುತ್ತಿದ್ದಾರೆ. ರಾಣಾ ನಟಿಸುವ ಸುದ್ದಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ರಾಣಾ ದಗ್ಗುಭಾಟಿ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. ಈಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಅಭಿಷೇಕ್ ನಟನೆಯ ಐತಿಹಾಸಿಕ ಸಿನಿಮಾದಲ್ಲಿ ರಾಣಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಶೂಟಿಂಗ್ ಏಪ್ರಿಲ್‌ನಿಂದ ಶುರುವಾಗಲಿದೆ ಎಂದು ತಿಳಿದು ಬಂದಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!