Vasanti Nalidag Movie Review: ಬದುಕಿನ ವ್ಯಾಖ್ಯಾನ ವಾಸಂತಿ ನಲಿದಾಗ

ಚಿತ್ರ : ವಾಸಂತಿ ನಲಿದಾಗ

ನಿರ್ದೇಶಕ: ರವೀಂದ್ರ ವಂಶಿ
ನಿರ್ಮಾಪಕ : ಕೆ.ಎನ್.ಶ್ರೀಧರ್
ತಾರಾಗಣ : ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ ಮುಂತಾದವರು

ರೇಟಿಂಗ್: 3.5/5

ಕಾಲೇಜು ಕ್ಯೂಟ್ ಲವ್ ಸ್ಟೋರಿ ಜೊತೆಗೆ ಜೀವನದ ವ್ಯಾಖ್ಯಾನ ಆಗಿ ವಾಸಂತಿ ನಲಿದಾಗ ಮೂಡಿ ಬಂದಿದೆ.

ಚಿತ್ರದಲ್ಲಿ ತಂದೆ ತಾಯಿಯ ಕರ್ತವ್ಯ, ಮಕ್ಕಳ ಜವಾಬ್ದಾರಿ, ಪ್ರೀತಿ ಪ್ರೇಮದ ಬಗ್ಗೆ ನಿರ್ಧಾರ, ಸ್ನೇಹಿತರ ಸಹಕಾರ ಎಲ್ಲಾ ಪೂರಕ ಅಂಶಗಳನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಚಿತ್ರದ ಮೊದಲ ಭಾಗ ಕಾಲೇಜು ಆವರಣ ಸುತ್ತುತ್ತದೆ. ಇನ್ನು ದ್ವಿತೀಯ ಭಾಗ ಗಮನ ಸೆಳೆಯುತ್ತದೆ. ಯುವಕ ಯುವತಿಯರ ಮನಸ್ಥಿತಿ, ಹಿರಿಯರ ಚಿಂತನೆ ಚಿತ್ರದಲ್ಲಿ ಮುಟ್ಟುವಂತಿದೆ.

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ನೋವು , ನಲುವಿನ ನಡುವೆ ಪ್ರಯಾಣ ಮಾಡಲೇಬೇಕು. ಅದೃಷ್ಟ ಅನ್ನೋ ಒಂದು ಅವಕಾಶ ಸಿಕ್ಕರೆ ಅದು ಬದುಕಿನ ದಿಕ್ಕನೇ ಬದಲಾಯಿಸುತ್ತದೆ. ತಂದೆ ತಾಯಿಯ ವಾತ್ಸಲ್ಯ , ಗೆಳೆಯರ ಸಹಕಾರ, ಪ್ರೀತಿಯ ಸೆಳೆತ, ವಾಸ್ತವತೆಯ ಬದುಕು ಹೀಗೆ ಒಂದಷ್ಟು ಎಚ್ಚರಿಕೆಯ ಅಂಶಗಳನ್ನು ತೆರೆ ಮೇಲೆ ತರುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಶ್ರೀ ಗುರು ಸಂಗೀತ ಗುನುಗುವಂತಿದೆ. ಪ್ರಮೋದ್ ಭಾರತೀಯ ಛಾಯಾಗ್ರಾಹಣದ ಕೆಲಸ ಓಕೆ ಅನಿಸುತ್ತದೆ. ನಾಯಕನಾಗಿ ಅಭಿನಯಿಸಿರುವ ರೋಹಿತ್ ಶ್ರೀಧರ್ ನಟನೆ, ಆಕ್ಷನ್ ಹಾಗೂ ಡ್ಯಾನ್ಸ್ ನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿ ಜೀವಿತ ವಸಿಷ್ಠ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಭಾವನಾ ಶ್ರೀನಿವಾಸ್ ಲೀಲಾಜಾಲವಾಗಿ ಪಾತ್ರಕ್ಕೆ ಜೀವ ತುಂಬಿ ಭರವಸೆ ಮೂಡಿಸಿದ್ದಾರೆ. ನಾಯಕನ ತಂದೆಯಾಗಿ ಸಾಯಿಕುಮಾರ್ ಪ್ರೀತಿಯ ವ್ಯಾಖ್ಯಾನ, ಬದುಕಿನ ಮೌಲ್ಯಗಳನ್ನು ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ. ಕುಟುಂಬ ಸಮೇತ ಚಿತ್ರ ನೋಡಲು ಅಡ್ಡಿ ಇಲ್ಲ.
______

Be the first to comment

Leave a Reply

Your email address will not be published. Required fields are marked *

Translate »
error: Content is protected !!