‘UI’ ಸಿನಿಮಾದಲ್ಲಿ ಸನ್ನಿ ಲಿಯೋನ್?

ಉಪೇಂದ್ರ ನಿರ್ದೇಶನದ ‘UI’ ಸಿನಿಮಾದಲ್ಲಿ ಮಾದಕ ನಟಿ ಸನ್ನಿ ಲಿಯೋನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಮಾತುಗಳು ಕೇಳಿ ಬಂದಿವೆ.

ಡಿಕೆ ಮತ್ತು ಚಾಂಪಿಯನ್ನಂತಹ ಚಿತ್ರಗಳಲ್ಲಿ ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್, ಯುಐ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಚಿತ್ರ ತಂಡ ಮಾತ್ರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ನಿಧಿ ಸುಬಯ್ಯ, ಇಂದ್ರಜಿತ್ ಲಂಕೇಶ್, ಪ್ರಶಾಂತ್ ಸಂಬರ್ಗಿ ಮತ್ತು ಓಂ ಸಾಯಿಪ್ರಕಾಶ್ ಅವರು ಅತಿಥಿ ಪಾತ್ರಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಚಿತ್ರದ ವಿಶೇಷವಾಗಿದೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಯುಐ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್, ವಿಕ್ರಾಂತ್ ರೋಣ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ. ಬಿಗ್ ಬಜೆಟ್ ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಇದಾಗಿದೆ. ಟಗರು, ಸಲಗ ಖ್ಯಾತಿಯ ಕೆಪಿ ಶ್ರೀಕಾಂತ್, ಲಹರಿ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!