Raymo Movie Review :ಸಂಗೀತಗಾರನ ಲವ್ ಸ್ಟೋರಿ ರೇಮೊ

ಚಿತ್ರ: ರೇಮೊ

ನಿರ್ದೇಶಕ : ಪವನ್ ಒಡೆಯರ್
ನಿರ್ಮಾಪಕ : ಸಿ.ಆರ್.ಮನೋಹರ್
ತಾರಾಗಣ: ಇಶಾನ್, ಆಶಿಕಾ ರಂಗನಾಥ್, ಶರತ್ ಕುಮಾರ್, ಮಧು ಬಾಲಾ, ರಾಜೇಶ್ ನಟರಂಗ, ಅಚ್ಚುತ್ ಕುಮಾರ್ ಇತರರು.

ರೇಟಿಂಗ್: 3.5/5

ಸಂಗೀತದ ಸುಧೆಯ ಮೂಲಕ ಅದ್ದೂರಿ ಬದುಕಿನ ಅನಾವರಣದಲ್ಲಿ ತ್ಯಾಗ, ಪ್ರೀತಿಯ ಮೋಹಕದ ಚಿಲುಮೆಯಾಗಿ “ರೇಮೊ” ಚಿತ್ರ ಮೂಡಿ ಬಂದಿದೆ.

ಕಥಾನಾಯಕ ನಾಯಕ ರೇಮೊ(ರೇವಂತ್)ಗೆ ಸಂಗೀತ ಎಂದರೆ ಜೀವ. ತನ್ನಿಷ್ಟದಂತೆ ಹಾಡುತ್ತ ಹಾಡುತ್ತಾ ರಾಕ್‍ಸ್ಟಾರ್ ಆಗಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ ಆತ ಬದುಕಲ್ಲಿ ಯಾವುದಕ್ಕೂ ಚಿಂತಿಸದೆ ತಾನು ಇಷ್ಟವಾದ ಹುಡುಗಿ ಜೊತೆಗೆ ತಿರುಗುವುದು, ಎಣ್ಣೆ, ಡ್ರಗ್ಸ್ ಬದುಕಿನ ಭಾಗ ಆಗಿರುತ್ತದೆ. ಮತ್ತೊಂದೆಡೆ ನಾಯಕಿ ಮೋಹನಾ(ಆಶಿಕಾ) ಶಾಸ್ತ್ರೀಯ ಸಂಗೀತ ಕಲಿತು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಹುಡುಗಿ. ಇವರಿಬ್ಬರ ಭೇಟಿ ಚಿತ್ರದ ಕಥೆಯಾಗಿ ಸಾಗುತ್ತದೆ.

ಒಂದು ವಿಭಿನ್ನ ಪ್ರೇಮ ಕಥೆಯನ್ನು ಸಂಗೀತದ ಮೂಲಕ ಹೊಸ ಆಯಾಮದ ಲವ್‍ಸ್ಟೋರಿಯನ್ನು ನಿರ್ದೇಶಕ ಪವನ್ ಒಡೆಯರ್ ಕಟ್ಟಿಕೊಟ್ಟಿದ್ದಾರೆ. ಪ್ರೀತಿ, ಮಮಕಾರ, ಸೇಡು, ಅದ್ದೂರಿ ದೃಶ್ಯ ವೈಭವ ಕಣ್ಮನ ಸೆಳೆಯುವಂತೆ ಪರದೆ ಮೇಲೆ ಮೂಡಿದೆ.

ಲವ್‍ಸ್ಟೋರಿ ಜೊತೆಗೆ ಅಪ್ಪ, ಅಮ್ಮನ ಸೆಂಟಿಮೆಂಟ್ ದೃಶ್ಯಗಳು ಮನ ಮುಟ್ಟುವಂತಿದೆ. ತಾಯಿ ಪಾತ್ರಧಾರಿ ಮಧುಬಾಲಾ, ಮಗ ಇಶಾನ್ ನಡುವಿನ ದೃಶ್ಯಗಳು ಭಾವುಕರನ್ನಾಗಿಸುತ್ತವೆ. ಚಿತ್ರವನ್ನು ಅದ್ಧೂರಿ ಆಗಿ ಛಾಯಾಗ್ರಾಹಕ ವೈದಿ ಸೆರೆ ಹಿಡಿದಿದ್ದಾರೆ.

ನಾಯಕ ನಟ ಇಶಾನ್ ಭರವಸೆಯ ಪ್ರತಿಭೆಯಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ಅವರು ಒಬ್ಬ ರಾಕ್‍ಸ್ಟಾರ್ ಆಗಿ, ತ್ಯಾಗಿಯಾಗಿ, ಪ್ರೇಮಿಯಾಗಿ ಇಷ್ಟವಾಗುತ್ತಾರೆ.

ನಾಯಕಿಯಾಗಿ ಅಭಿನಯಿಸಿರುವ ಆಶಿಕಾ ರಂಗನಾಥ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪ್ರದಾಯಸ್ಥ ಹೆಣ್ಣುಮಗಳಾಗಿ ಹಾಗೂ ಬೋಲ್ಡ್ ಲುಕ್ ನಲ್ಲಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.

ಉಳಿದಂತೆ ಮಧು ಬಾಲಾ ಶರತ್ ಕುಮಾರ್, ಶರಣ್ಯ ಹುಲ್ಲೂರು, ರಾಜೇಶ್ ನಟರಂಗ, ಅಚ್ಯುತ್‍ಕುಮಾರ್ ಪಾತ್ರಗಳಿಗೆ ಜೀವ ತುಂಬಿದ್ದಾರೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!