ಪ್ರಕಾಶ್ ರಾಜ್ ಜೊತೆ ನಟಿಸಲು ಕಲಾವಿದರ ಹಿಂಜರಿಕೆ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ರಾಜಕೀಯ ನಿಲುವುಗಳು, ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿವೆ.

ಸ್ವತಃ ಅದನ್ನು ಪ್ರಕಾಶ್ ಹೇಳಿಕೊಂಡಿದ್ದಾರೆ. ಸಹ ಕಲಾವಿದರು ತನ್ನೊಂದಿಗೆ ನಟಿಸಲು ಭಯಪಡುತ್ತಾರೆ ಎಂದು ನಟ ಪ್ರಕಾಶ್​ ರಾಜ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ನನ್ನ ರಾಜಕೀಯ ದೃಷ್ಟಿಕೋನವೇ ಇದಕ್ಕೆ ಕಾರಣ. ಆದರೆ ನಾನು ಯಾವುದಕ್ಕೂ ಚಿಂತಿಸುವುದಿಲ್ಲ ಎಂದಿದ್ದಾರೆ.

ನನ್ನ ಜೊತೆ ನಟಿಸಿದರೆ ಅಪಾಯದಲ್ಲಿ ಸಿಲುಕಬೇಕಾಗುತ್ತದೆ ಎಂಬುದು ಕೆಲ ಕಲಾವಿದರ ಆತಂಕವಾಗಿದೆ. ನಾನು ಅವರ ಅಸೌಖ್ಯವನ್ನು ಅರ್ಥ ಮಾಡಿಕೊಳ್ಳಬಲ್ಲೆ. ನನ್ನ ಜೊತೆ ನಟಿಸುವುದರಿಂದ ಅಂತರ ಕಾಯ್ದುಕೊಂಡರೂ ನಾನು ಪಶ್ಚಾತ್ತಾಪ ಪಡುವುದಿಲ್ಲ ಎಂದು ಪ್ರಕಾಶ್​ ರಾಜ್​ ತಿಳಿಸಿದ್ದಾರೆ.

ರಾಜಕೀಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇನೆ. ನಾನು ನಂಬಿರುವ ಸಿದ್ಧಾಂತಗಳಿಂದ ನಾನು ಹಿಂದೆ ಸರಿದರೆ ಅದು ಇತರರಿಗೆ ಲಾಭವಾಗುತ್ತದೆ. ಅದು ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಇತರೆ ನಟರ ವಿರುದ್ಧ ನಾನು ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದಿದ್ದಾರೆ.

ಈಗ ನನಗೆ ಯಾರು ಯಾರೆಂದು ತಿಳಿದಿದೆ. ನಾನು ಹೆಚ್ಚು ವಿಮೋಚನೆ ಹೊಂದಿದ್ದೇನೆ. ನಾನು ನನ್ನ ಧ್ವನಿಯನ್ನು ಎತ್ತದಿದ್ದರೆ, ನನ್ನ ಪಾತ್ರಗಳಿಂದಾಗಿ ಮಾತ್ರ ನಾನು ಉತ್ತಮ ನಟ ಎಂದು ಗುರುತಿಸಲ್ಪಡುತ್ತಿದ್ದೆ. ಆಗ ನನ್ನ ವ್ಯಕ್ತಿತ್ವ ಜನರಿಗೆ ಗೊತ್ತಾಗುತ್ತಿರಲಿಲ್ಲ. ಹೀಗೆ ಮಾಡುವುದರಿಂದ ಖರ್ಚು ಬರುತ್ತದೆ. ಆದರೆ ನಾನು ಅದನ್ನು ನಿಭಾಯಿಸಬಲ್ಲೆ ಎಂದಿದ್ದಾರೆ ಪ್ರಕಾಶ್ ರಾಜ್.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!