ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕಂಪ್ಲೀಟ್

ರಮ್ಯಾ ನಿರ್ಮಾಣದ ಮೊದಲ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ.

ರಾಜ್ ಬಿ ಶೆಟ್ಟಿ ಅವರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಈ ಸಿನಿಮಾದ ಶೂಟಿಂಗ್ ಸಿಂಗಲ್ ಶೆಡ್ಯೂಲ್​​ನಲ್ಲಿ ಮುಗಿಯಲಿದೆ ಎಂದು ಈ ಹಿಂದೆಯೇ ಚಿತ್ರತಂಡ ಹೇಳಿತ್ತು.

ಸಿರಿ ರವಿಕುಮಾರ್ ಅವರು ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಮೋಹಕತಾರೆ ರಮ್ಯಾ, ಇದೇ ಮೊದಲ ಬಾರಿ ಪ್ರೊಡ್ಯೂಸರ್ ಆಗಿ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ರಮ್ಯಾ ಮೊದಲ ಬಾರಿ ನಟಿ ನಿರ್ಮಾಪಕಿ ಮತ್ತು ನಟಿಯಾಗಿ ಕಾಣಿಸುತ್ತಿದ್ದಾರೆ ಎಂದು ಎಲ್ಲರೂ ಕುತೂಹಲದಲ್ಲಿದ್ದರು. ರಮ್ಯಾ ಅವರ ಮುಂದಿನ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಅನೌನ್ಸ್ ಆದರೂ ನಂತರ ರಮ್ಯಾ ಇದರಿಂದ ಹೊರ ಬಂದರು.

ನಟಿ ಸಿರಿ ರವಿಕುಮಾರ್ ಅವರು ಈ ಹಿಂದೆ ಸಕುಟುಂಬ ಸಮೇತ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದ ಸಿರಿ ಅವರು ಮಾಡೆಲ್ ಕೂಡಾ ಹೌದು.

ಸಿನಿಮಾ ಶೂಟಿಂಗ್ ಸದ್ಯ ಮುಕ್ತಾಯವಾಗಿದ್ದು ಈಗ ಸಿನಿಮಾ ರಿಲೀಸ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಉಂಟಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!