Kannada Actor Lohitashwa Passed Away : ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟ ಲೋಹಿತಾಶ್ವ (Veteran Actor Lohitashwa) ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 2.45 ಕ್ಕೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಳೆದ ಹಲವು ಸಮಯಗಳಿಂದಲೂ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ತುಮಕೂರಿನ ತೊಂಡಗೆರೆಯಲ್ಲಿ ಅಗಸ್ಟ್ 5 1942ರಂದು ಜನಿಸಿದ ಲೋಹಿತಾಶ್ವ ಕನ್ನಡದಲ್ಲಿ ಸುಮಾರು 500 ಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ನಾಟಕ, ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರನಾಗ್ ನಟನೆಯ ಮಾಲ್ಗುಡಿ ಡೇಸ್, ಗೃಹಭಂಗ, ನಾಟ್ಯರಾಣಿ ಶಾಂತಲಾ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಸಾರಥಿ (2011), ಅಭಿಮನ್ಯು (1990), ಆಪದ್ಬಾಂಧವ (1987), A. K. 47 (1999), ಅತಿರಥ ಮಹಾರಥ (1987), ಅವತಾರ ಪುರುಷ (1988), ಬಂದಾ ಮುಕ್ತಾ (1987), ಬೇಟೆ (1986), ಬೇಡಿ (1987), C. B. I. ಶಿವ (1991), ಚದುರಂಗ (1988), ಚಂದು (2002), ಚಕ್ರವರ್ತಿ (1990), ಚಾಣಕ್ಯ (1984), ಚಿನ್ನಾ (1994), ದಾದಾ (1988), ಡಿಸೆಂಬರ್ 31 (1986), ದೇವಾ (1987), ನಾಟಕ (2012), ಎಲ್ಲರಂತಲ್ಲ ನನ್ನ ಗಂಡ (1997), ಏಕಲವ್ಯ (1990), ತುರ್ತು ಪರಿಸ್ಥಿತಿ (1995), ಗಜೇಂದ್ರ (1984), ಗಲಿಗೆಯ್, ಗೀತಾ (1996), ಹಲೋ ಡ್ಯಾಡಿ (1988), ಹೊಸ ನೀರು (1985), ಹುಲಿಯಾ (1996), ಇಂದಿನ ರಾಮಾಯಣ (1984), ಇಂದ್ರಜಿತ್ (1989), ಜಯಸಿಂಹ (1987), ಕಡನಾ (1991), ಕಾಡಿನ ರಾಜ (1985),ಕಾವೇರಿ ನಗರ (2013), ಕಲಾವಿದ (1997), ಕೋನಾ ಎಡೈತೆ (1995), ಲಾಕಪ್ ಡೆತ್ (1994), ಮಾರ್ಜಾಲ (1986),ಮಿಡಿದ ಹೃದಯಗಳು (1993), ಮೂರು ಜನ್ಮ (1984), ಮುನಿಯನ ಮದರಿ (1981), ಮೈಸೂರು ಜಾಣ (1992), ಮಿ. ರಾಜ (1987), ನವಭಾರತ (1988), ನೀ ಬರೆದ ಕಾದಂಬರಿ (1985), ನವದೆಹಲಿ (1988), ಒಲವಿನ ಆಸರೆ (1988), ಒಲವು ಮೂಡಿದಗ (1984), ಒಂದು ಊರಿನ ಕಥೆ (1978), ಒಂಥರಾ ಬಣ್ಣಗಳು (2018), ಪೊಲೀಸ್ ಲಾಕಪ್ (1992), ಪ್ರತಾಪ್ (1990), ಪ್ರೀತಿ ವಾತ್ಸಲ್ಯ (1984), ರೆಡಿಮೇಡ್ ಗಂಡ (1991), ರಣಚಂಡಿ (1991), ಸಾಂಗ್ಲಿಯಾನ (1988), ಎಸ್.ಪಿ. ಸಾಂಗ್ಲಿಯಾನ ಭಾಗ-2 (1990), ಸಾಹಸ ವೀರ (1988), ಸಮಯದ ಗೊಂಬೆ (1984), ಸಂಭವಾಮಿ ಯುಗೇ ಯುಗೇ (1988), ಸಂಗ್ರಾಮ (1987), ಸಾರಥಿ (2011), ಸವ್ಯಸಾಚಿ (1995), ಶಾಂತಿ ನಿವಾಸ (1997),ಶಿವರಾಜ್ (1991), ಸಿಂಹದ ಗುರಿ (1998), ಸಿಂಹಾಸನ (1983), ಸ್ನೇಹಲೋಕ (1999), ಸುಂದರಕಾಂಡ (1991), ತುಂಬಿದ ಮನೆ (1995),ಟೈಮ್ ಬಾಂಬ್ ವಿಶ್ವ (1999) ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!