ಡಿಸೆಂಬರ್ 9ಕ್ಕೆ ವಿಜಯಾನಂದ

ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರ ‘ವಿಜಯಾನಂದ’ ಡಿಸೆಂಬರ್ 9 ರಂದು ಬಿಡುಗಡೆ ಆಗಲಿದೆ.

ರಿಷಿಕಾ ಶರ್ಮಾ ನಿರ್ದೇಶನದ ‘ವಿಜಯಾನಂದ’ ಚಿತ್ರ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

‘ಹಾಗೆ ಆದ ಆಲಿಂಗನ’ ಎಂಬ ಹಾಡನ್ನು ಕನ್ನಡ ಮತ್ತು ಹಿಂದಿಯಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರು ಸಂಯೋಜಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಗೋಪಿ ಸುಂದರ್ ಅವರು ವಿಜಯಾನಂದ್ ಸಿನಿಮಾದೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ವಿಜಯ್ ಸಂಕೇಶ್ವರ್, ನಿರ್ದೇಶಕಿ ರಿಷಿಕಾ ಶರ್ಮಾ ಅವರು ನನ್ನ ಜೀವನಾಧಾರಿತ ಸಿನಿಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಆರಂಭದಲ್ಲಿ ಹಿಂದೇಟು ಹಾಕಿದ್ದೆ. ರಿಷಿಕಾ ಅವರ ಉತ್ತಮ ಪ್ರಯತ್ನಕ್ಕಾಗಿ ನಾನು ಪ್ರಶಂಸಿಸುತ್ತೇನೆ. ಅವರು ಉತ್ತಮ ಸಿನಿಮಾವನ್ನು ಮಾಡಿದ್ದು ನನ್ನ ಮಗ ಆನಂದ ಸಂಕೇಶ್ವರ್ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.

ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಉದ್ಯಮಿಗಳು. ನಾನು ಸಾರಿಗೆ ಉದ್ಯಮವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದಾಗ ನನ್ನ ತಂದೆ ಆಘಾತಕ್ಕೊಳಾಗಿದ್ದರು. ನನ್ನ ಬದುಕಿನ ನೈಜತೆಯನ್ನು ಚಿತ್ರ ಬಿಂಬಿಸಬೇಕು ಎಂದು ನಿರ್ದೇಶಕರಿಗೆ ಹೇಳಿದ್ದೆ. ಚಿತ್ರಕ್ಕೆ ಹೆಚ್ಚುವರಿ ಏನನ್ನೂ ಸೇರಿಸಬಾರದು ಎಂದು ತಿಳಿಸಿದ್ದೆ. ಪರದೆ ಮೇಲೆ ನಿಹಾಲ್ ನೋಡಿದಾಗ ನನ್ನ ಸಣ್ಣ ವಯಸ್ಸಿನ ದಿನಗಳು ನೆನಪಿಗೆ ಬರುತ್ತವೆ ಎಂದರು.

ಚಿತ್ರದಲ್ಲಿ ಸಿರಿ ಪ್ರಹ್ಲಾದ್, ನಿಹಾಲ್ , ಭರತ್ ಬೋಪಣ್ಣ ಮತ್ತು ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!