ಮಾಲಿವುಡ್ನ ಸ್ಮೈಲ್ ಬೇಬಿ ಅಂದ್ರೆ ಥಟ್ ಅಂತ ನೆನಪಗೋದು ಕೀರ್ತಿ … ಈಕೆ ಕಾಲಿವುಡ್ನಲ್ಲಿ ಕೊಡ ಇನ್ನು ಫೇಮಾಸ್ …2000ರಲ್ಲಿ ಸಿನಿ ಜಗತ್ತಿಗೆ ಕಾಲಿಟ್ಟ ಇವಳು ಮೊದಲು ಆ್ಯಕ್ಟಿಂಗ್ ಮಾಡಿದ್ದು ಮಲಯಾಳಂನ Piolts ಚಿತ್ರದ ಮೂಲಕ..ಈ ಮೂವಿನಲ್ಲಿ ಕೀರ್ತಿ ಬಾಲನಟಿಯಾಗಿ ಆಕ್ಟ್ ಮಾಡಿದ್ದರು.
ನಂತರ ಅಚ್ಚನೆಯಾಣೆನಿಕ್ಕಿಷ್ಟಂ, ಕುಬೇರನ್, ಸಿನಿಮಾದಲ್ಲಿ ಈಕೆ ಆಕ್ಟ್ ಮಾಡಿದ್ದು ಚೈಲ್ಡ್ ಆರ್ಟಿಸ್ಟ್ ಆಗಿಯೇ… ಅಮ್ಮೇಲೆ ಈ ಬೆಡಗಿ ಒಬ್ಬ ದೊಡ್ಡ ಸ್ಟಾರ್ ಜೊತೆಗಿ ತನ್ನ ಸಿನಿ ಜರ್ನಿಯನ್ನ ಶುರುಮಾಡಿದ್ರು…ಯಸ್ ಗೀತಾಂಜಲಿ ಮೂವಿನಲ್ಲಿ ಮೋಹನ್ಲಲ್ ಜೋಡಿಯಾಗಿ ಕಾಣಿಸಿಕೊಂಡು ಸೈ ಎನಿಸಿಕೊಂಡ್ರು…
ಮಾಲಿವುಡ್ನಲ್ಲಿ ಫೇಮಸ್ ಆಗಿ .. ಈಕೆ ತನ್ನ ಎಂಟ್ರಿ ಕೊಟ್ಟಿದ್ದು ಕಾಲಿವುಡ್ ಹಾಗೂ ಟಾಲಿವುಡ್ಗೆ.. ಚೆಲುವೇಯ ಆಕ್ಟಿಂಗ್ ಗೆ ಪ್ರೇಕ್ಷಕರು ಫಿದಾ ಆದ್ರು…ಈ ಚೆಲುವೆಯ ನಗುವಿಗೆ ಪಡ್ಡೆ-ಹುಡುಗ್ರು ಹಾಗೂ ಸ್ಟಾರ್ಸ್ ಕೂಡ ವಾವ್ what a smile ಅಂತ ಹೇಳೋಕ್ಕೆ ಶುರುಮಾಡಿದ್ರು.. ಕೀರ್ತಿ ಸುರೇಶ್ ನಗು ಏನೋ ಒಂಥಾರ ಮೋಡಿ ಮಾಡಿತ್ತು..
ಕೀರ್ತಿ ಸುರೆಶ್ ಈಗ ನಂ1 ನಟಿ ಕೂಡ ಹೌದು… ಈ ಬೇಬ್ಗೆ ಈಗ ಸಾಕಷ್ಟು ಆಫರ್ಸ್ಗಳ ಸುರಿ ಮಳೆ .. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈ ಬಿಜಿ ಕೂಡ ಹೌದು….ಈಕೆ ಮಹಾನಟಿ ನಲ್ಲಿ ನಟಿಸಿದ ಮೇಲಂತೂ ಕೇಳ್ಬೇಕಾ ಡಿಮ್ಯಾಂಡ್ ಮೆಲೆ ಡಿಮ್ಯಾಂಡ್
”ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಕನ್ನಡ ಸಿನಿಮಾ ಮಾಡುತ್ತೇನೆ” ಇದು ಬೇರೆ ಭಾಷೆಯ ದೊಡ್ಡ ನಟ, ನಟಿಯರು ಹೇಳುವ ಕಾಮನ್ ಡೈಲಾಗ್. ಬೆಂಗಳೂರಿಗೆ ಬರುವ ಇತರ ಭಾಷೆಯ ಕಲಾವಿದರು ಈ ಮಾತನ್ನು ಪದೇ ಪದೇ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ಇದೀಗ ಟಾಲಿವುಡ್ ನಟಿ ಕೀರ್ತಿ ಸುರೇಶ್ ತಾವೇ ಕನ್ನಡ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ‘ಮಹಾನಟಿ’ ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿರುವ ಈ ನಟಿ ಕನ್ನಡ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
”ಬೆಂಗಳೂರು ಅಂದರೆ ನನಗೆ ತುಂಬ ಇಷ್ಟ. ಇಲ್ಲಿ ‘ಮಹಾನಟಿ’ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಹೀಗಿದ್ದರೂ ಕನ್ನಡ ಸಿನಿಮಾಗೆ ನನಗೆ ಅವಕಾಶ ಸಿಗುತ್ತಿಲ್ಲ. ಇದುವರೆಗೂ ಕನ್ನಡದಲ್ಲಿ ನಾನು ನಟಿಸಿಲ್ಲ. ಸ್ಯಾಂಡಲ್ ವುಡ್ ಬರಲು ನಾನು ಕಾಯುತ್ತಿದ್ದೇನೆ” ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. ಇಂತಹ ನಟಿ ಈಗ ಕನ್ನಡಕ್ಕೆ ಬರ್ತಿನಿ ಎಂದಿದ್ದು, ಯಾವ ನಿರ್ದೇಶಕ , ನಿರ್ಮಾಪಕರು ಕೀರ್ತಿ ಸುರೇಶ್ ಕಡೆ ನೋಡುತ್ತಾರೆ? ಹಾಗೂ ಯಾವ ಸಿನಿಮಾದ ಮುಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗ್ತಾರೋ ಕಾದು ನೋಡ್ಬೇಕು.
Pingback: DevSecOps services