1986 ರಲ್ಲಿ ‘ಒಲವಿನ ಉಡುಗೊರೆ ‘ ಚಿತ್ರವನ್ನು ಡಿ.ರಾಜೇಂದ್ರಬಾಬು ನಿರ್ದೇಶನ ಮಾಡಿದ್ದರು. ಈ ಚಿತ್ರವು 40 ವಾರ ಪ್ರದರ್ಶನ ಕಾಣುವ ಮುಖಾಂತರ ಬಾರೀ ಜನಪ್ರಿಯತೆ ಗಳಿಸಿತ್ತು. ಈ ಚಿತ್ರದಲ್ಲಿ ನಾಯಕ ಅಂಬರೀಶ್, ನಾಯಕಿ ಮಂಜುಳಾ ಶರ್ಮಾಗೆ ರಕ್ತದಲ್ಲಿ ಪ್ರೇಮಪತ್ರ ಬರೆದು ಆಕೆ ಹುಟ್ಟುಹಬ್ಬಕ್ಕೆ ಆ ‘ಒಲವಿನ ಉಡುಗೊರೆ ಕೊಡಲೇನು’ ಅಂತಾ ಹಾಡುವ ಇದಾಗಿತ್ತು. ಇದೀಗ ಇದೇ ಹಾಡನ್ನು ’ ಅಮರ್’ ಚಿತ್ರದಲ್ಲಿ ಮರು ಬಳಕೆ ಮಾಡಿಕೊಳ್ಳಲಾಗಿದೆ.
ನಾಗಶೇಖರ್ ಆ್ಯಕ್ಷನ್ ಕಟ್ ಹೇಳ್ತಾ ಇರೋ ಈ ಚಿತ್ರದಲ್ಲಿ ನಾಯಕ ಅಭಿಷೇಕ್ ಗೆ ನಾಯಕಿಯಾಗಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದು, ಚಿಕ್ಕಣ್ಣ, ಸುಧಾರಾಣಿ, ದೀಪಕ್ ಶೆಟ್ಟಿ, ಸಾಧುಕೋಕಿಲ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜಾಲಿಬಾಸ್ಟಿನ್, ಪಾಡ್ಯನ್ ಅವರ ಸಾಹಸ, ಮೋಹನ್ ಬಿ.ಕೆರೆ ಅವರ ಕಲೆ, ದೀಪು ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದ್ದು,ಸಹಜವಾಗಿನೇ ಕುತೂಹಲವನ್ನ ಹುಟ್ಟುಹಾಕಿದೆ.
Pingback: DevSecOps definition
Pingback: 밤토끼시즌2