ರೇಮೊ ಹಾಡು ರಿಲೀಸ್

ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ಬಹುನಿರೀಕ್ಷಿತ ರೇಮೊ ಚಿತ್ರದ ಹೋದರೆ ಹೋಗು ಲಿರಿಕಲ್ ವಿಡಿಯೋ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿದೆ.

ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಜಯದತ್ತ ಫಿಲ್ಮ್ ಬ್ಯಾನರ್ ನಡಿ ಸಿ ಆರ್ ಮನೋಹರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿ ಆರ್ ಗೋಪಿ ಸಹ ನಿರ್ಮಾಪಕರಾಗಿದ್ದಾರೆ.

ಇತ್ತೀಚಿಗಷ್ಟೇ ಈ ಸಿನಿಮಾದ ‘ತಾರೆಯೊ ಕೋಟಿ ಚಂದಿರ ಒಂಟಿ’ ಎಂಬ ಹಾಡು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ದೀಪಾವಳಿ ಹಬ್ಬದ ಪ್ರಯುಕ್ತ ಈ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು ಸಿನಿ ಪ್ರೇಮಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!