ಗೋವಾ ಚಲನಚಿತ್ರೋತ್ಸವದಲ್ಲಿ ಮೂರು ಕನ್ನಡ ಚಿತ್ರಗಳು

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ)ದಲ್ಲಿ ಮೂರು ಕನ್ನಡ ಚಿತ್ರಗಳು ಪ್ರದರ್ಶನ ಆಗಲಿವೆ.

ಕನ್ನಡದ ಹದಿನೇಲೆಂಟು, ನಾನು ಕುಸುಮಾ ವೈಶಿಷ್ಟ್ಯ ಪೂರ್ಣ ಚಿತ್ರಗಳ ಪಟ್ಟಿಯಲ್ಲಿದ್ದರೆ, ಮಧ್ಯಂತರ ವೈಶಿಷ್ಟ್ಯಪೂರ್ಣವಲ್ಲದ ಚಿತ್ರಗಳ ಪಟ್ಟಿಯಲ್ಲಿ ಸೇರಿದೆ.

ಚಲನಚಿತ್ರೋತ್ಸವದಲ್ಲಿ ಜೈ ಭೀಮ್, ಮೇಜರ, ದಿ ಕಾಶ್ಮೀರ್ ಪೈಲ್ ಸೇರಿದಂತೆ 25ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

10 ಹಿಂದಿ ಭಾಷೆಯ ಚಿತ್ರ, ತಮಿಳು, ತೆಲುಗಿನಲ್ಲಿ ತಲಾ ನಾಲ್ಕು ಚಿತ್ರಗಳು, ಬಂಗಾಳಿಯ ಎರಡು ಚಿತ್ರಗಳು, ಇಂಗ್ಲಿಷ್ ಭಾಷೆಯ ಏಳು ಚಲನಚಿತ್ರಗಳು, ಕನ್ನಡ ಮತ್ತು ಮಲಯಾಳಂನಲ್ಲಿ ಮೂರು ಚಲನಚಿತ್ರಗಳು, ಮರಾಠಿಯಲ್ಲಿ ಐದು, ಮೈಥಿಲಿ, ಕೊಂಕಣಿ, ಮಣಿಪುರಿ, ಸಂಸ್ಕೃತ, ಇರುಲಾ, ಒರಿಯಾ ಭಾಷೆಗಳ ತಲಾ ಒಂದು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಪಿಐಬಿ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ವಿನೋದ್ ಗಣತ್ರಾ ನೇತೃತ್ವ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿದೆ. ಎ.ಕಾರ್ತಿಕ್ ರಾಜಾ, ಆನಂದ ಜ್ಯೋತಿ, ಡಾ ಅನುರಾಧಾ ಸಿಂಗ್ ಮತ್ತು ಸೈಲೇಶ್ ದವೆ ಸೇರಿದಂತೆ 12 ಸದಸ್ಯರು ಸಮಿತಿಯ ಸದಸ್ಯರಾಗಿದ್ದರು.

________

Be the first to comment

Leave a Reply

Your email address will not be published. Required fields are marked *

Translate »
error: Content is protected !!