ಕ್ರೇಜಿಬಾಯ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಆಶಿಕಾ ರಂಗನಾಥ್ ಈಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇತ್ತೀಚೆಗಷ್ಟೇ ಆಶಿಕಾ ರಂಗನಾಥ್ ಅವರ ನಟನೆಯ ತಮಿಳಿನ ನಟ ಸಿದ್ಧಾರ್ಥ್ ಜೊತೆಗಿನ ಹೊಸ ಸಿನಿಮಾ ಸೆಟ್ಟೇರಿದೆ.
ಇದೀಗ ತೆಲುಗು ನಟ ಕಲ್ಯಾಣ್ ರಾಮ್ ಜೊತೆ ಅವರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಿಗ್ ಬಜೆಟ್ ನಲ್ಲಿ ರೆಡಿಯಾಗುತ್ತಿರುವ ಈ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ.
ಸ್ಯಾಂಡಲ್ವುಡ್ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಮನೆಮಾತಾದ ಆಶಿಕಾ, ತಮಿಳು, ತೆಲುಗು ಚಿತ್ರಗಳಲ್ಲಿ ಸದ್ದು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Be the first to comment