ನವೆಂಬರ್ ನಲ್ಲಿ ತಿಮ್ಮಯ್ಯ ಅಂಡ್ ತಿಮ್ಮಯ್ಯ ತೆರೆಗೆ ಸಾಧ್ಯತೆ

ದಿಗಂತ್ ಮತ್ತು ಅನಂತ್ ನಾಗ್ ಅಭಿನಯದ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರವನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ.

ಚಿತ್ರ ನಿರ್ಮಾಪಕರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ನಂತರ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ನವೆಂಬರ್ ಎರಡನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಿಮ್ಮಯ್ಯ ಆಂಡ್ ತಿಮ್ಮಯ್ಯ 30 ವರ್ಷಗಳ ನಂತರ ಭೇಟಿಯಾಗುವ ಅಜ್ಜ ಮತ್ತು ಮೊಮ್ಮಗನ ಕಥೆಯಾಗಿದೆ. ಕೆಲ ಘಟನೆಗಳಿಂದಾಗಿ ತಾತ ಹಾಗೂ ಮೊಮ್ಮಗ ಒಂದು ಸೂರಿನಡಿ ಇರಲೇಬೇಕಾಗುತ್ತದೆ.ಒಂದೇ ಸೂರಿನಡಿ ಇರುವಾಗ ಇಬ್ಬರು ತಮ್ಮ ನಡುವಿನ ಕಾಣೆಯಾದ ಸಂಪರ್ಕವನ್ನು ಪುನಃ ಕಂಡುಕೊಳ್ಳುತ್ತಾರೆ ಎನ್ನುವುದು ಸಿನಿಮಾದ ಕಥೆ ಆಗಿದೆ.

ಚಿತ್ರವು ಹಾಸ್ಯ ಪ್ರಧಾನವಾಗಿದೆ. ಕೌಟುಂಬಿಕ ಸಂಬಂಧಗಳ ಪ್ರಾಮುಖ್ಯತ ಬಗ್ಗೆಯೂ ಮಾತನಾಡುತ್ತದೆ ಎಂದು ನಿರ್ಮಾಪಕ ಸಂಜಯ್ ಶರ್ಮಾ ಮಾಹಿತಿ ನೀಡಿದ್ದಾರೆ.

ಚಿತ್ರದಲ್ಲಿ ದಿಗಂತ್ ಅವರಿಗೆ ನಾಯಕಿಯಾಗಿ ನಟಿ ಐಂದ್ರಿತಾ ರೈ ಹಾಗು ನಟಿ ಶುಭ್ರಾ ಅಯ್ಯಪ್ಪ ನಟಿಸಿದ್ದಾರೆ. ಸಿದ್ಲಿಂಗು ಶ್ರೀಧರ್ ಮತ್ತು ದಿಲೀಪ್ ಬಿ. ಕುಮಾರ್ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬಾಲಕೃಷ್ಣ ತೋಟ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರ ಕಥೆಯನ್ನು ಸಂಜಯ್ ಶರ್ಮಾ ಬರೆದಿದ್ದಾರೆ. ಸಂಜಯ್ ಸಹೋದರ ರಾಜೇಶ್ ಶರ್ಮಾ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!