ಅ.21ಕ್ಕೆ ‘ಗಂಧದ ಗುಡಿ’ ಪ್ರೀ-ರಿಲೀಸ್​ ಕಾರ್ಯಕ್ರಮ

ಪುನೀತ್​ ರಾಜ್​ಕುಮಾರ್ ನಟನೆಯ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅ.28ಕ್ಕೆ ಬಿಡುಗಡೆ ಆಗಲಿದ್ದು, ಅ.21ರಂದು ಪ್ರೀ-ರಿಲೀಸ್​ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದಲ್ಲಿ ಭಾಗಿ ಆಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಅವರನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ , ರಾಘವೇಂದ್ರ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಮುಂತಾದವರು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಇಂದು ಆಹ್ವಾನಿಸಿದ್ದಾರೆ.

ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ‘ಪುನೀತ ಪರ್ವ’ ಎಂದು ಕರೆಯಲಾಗಿದೆ. ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಆಮಂತ್ರಣ ಪತ್ರಿಕೆ ನೀಡಲಾಗಿದೆ.

ಸಂಪೂರ್ಣ ಮರದಿಂದ ಮಾಡಲಾದ ಆಹ್ವಾನ ಪತ್ರಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿ ಇದೆ. ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಎಂದು ಬರೆದಿರುವ ಹಸ್ತಾಕ್ಷರ ಇದೆ. ಅಮಿತಾಭ್ ಬಚ್ಚನ್​, ರಜನಿಕಾಂತ್​ ಮುಂತಾದ ಗಣ್ಯರಿಗೆ ಈ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ.

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಅಕ್ಟೋಬರ್ 28ರಂದು ಚಿತ್ರ ರಿಲೀಸ್ ಆಗಲಿದೆ.

ರಾಜ್ಯದೆಲ್ಲೆಡೆ ಗಂಧದ ಗುಡಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಪುನೀತ್ ಕಟ್ಟಕಡೆಯದಾಗಿ ಅಭಿನಯಿಸಿರುವ ಗಂಧದ ಗುಡಿ ಚಿತ್ರದಲ್ಲಿ ಅಪ್ಪು ಧ್ವನಿ ಕೂಡ ಇದೆ. ಗಂಧದ ಗುಡಿ ಕನ್ನಡ ನಾಡಿನ ದಟ್ಟ ಅರಣ್ಯದಲ್ಲಿ ಅಡಗಿದ ಅಪರೂಪದ ವಿಷಯಗಳನ್ನು ಕನ್ನಡಿಗರಿಗೆ ಕಟ್ಟಿ ಕೊಡುತ್ತಿದೆ. ಇದರ ನಿರ್ದೇಶಕರು ಅಮೋಘವರ್ಷ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!