ಚಂದನ್ ಶೆಟ್ಟಿ ಈಗ “ಸೂತ್ರಧಾರಿ”

ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ “ಸೂತ್ರಧಾರಿ” ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

ಇದು ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ. ಆಗಿದೆ. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಗೋವಿಂದರಾಜು, ಸಂಜಯ್ ಗೌಡ, ಗಿರೀಶ್, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಸೂತ್ರಧಾರಿ” ಚಿತ್ರದ ಚಿತ್ರೀಕರಣ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.‌ ಮೈ ಮೂವೀ ಬಜಾರ್ ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ “ಎಲ್ರ ಕಾಲೆಳಿಯುತ್ತೆ ಕಾಲ”. ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ. “ಸೂತ್ರಧಾರಿ” ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಎಂದು ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು.

“ಸೂತ್ರಧಾರಿ” ಎಲ್ಲರಿಗೂ ಮೆಚ್ಚುಗೆಯಾಗುವ ಕಥಾಹಂದರ ಹೊಂದಿದೆ. ನಾನು ನವರಸನ್ ಅವರ ಬಳಿ ಸಹ ನಿರ್ದೇಶಕನಾಗಿ ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡಿದ್ದೇನೆ.‌ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ನಿರ್ದೇಶಕ ಕಿರಣ್ ಕುಮಾರ್ ಹೇಳಿದರು.

‌ನಾಯಕಿ ಅಪೂರ್ವ, ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್, ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಗೀತರಚನೆ, ಸಂಭಾಷಣೆ ಬರೆದಿರುವ ಕಿನಾಲ್ ರಾಜ್, ಸಂಕಲನಕಾರ ಸತೀಶ್ ಚಂದ್ರಯ್ಯ ಇದ್ದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!