ಕ್ರೈಂ-ಥ್ರಿಲ್ಲರ್ ಕಥೆ ಹೊಂದಿದ ‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾ ನ. 11ಕ್ಕೆ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿದೆ. ವಿಭಿನ್ನ ಸ್ಟುಡಿಯೋಸ್, ಕೀಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಹಯೋಗದಲ್ಲಿ ಚಿತ್ರ ನಿರ್ಮಿಸುತ್ತಿದೆ.
ಚಿತ್ರದಲ್ಲಿ ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ, ವಿಠಲ್ ಪರೀಟ, ಉಮ್ಮತ್ತಾಲ್ ಸತ್ಯ, ವಿನೀತ್ ಕಟ್ಟಿ, ನಂದ ಗೋಪಾಲ್, ದಯಾ ನೀನಾಸಂ, ಹರ್ಷ, ಪ್ರವೀಣ್ ಕೆಬಿ, ರವಿ ಜಿಗಣಿ, ಮಲ್ಲಿಕಾರ್ಜುನ್, ಮಧುಸೂದನ್, ಪವನ್ ನಟಿಸಿದ್ದಾರೆ.
ಸುಜ್ಞಾನ್ ಛಾಯಾಗ್ರಹಣ, ರೋಹಿತ್ ಸೋವರ್ ಸಂಗೀತ, ಸುರೇಶ್ ಆರ್ಮುಗಂ ಸಂಕಲನ ಚಿತ್ರಕ್ಕಿದೆ. ರವೀಂದ್ರ ಪರಮೇಶ್ವರಪ್ಪ, ಪ್ರವೀಣ್ ಕುಮಾರ್ ಜಿ ಅವರು ಸಂಭಾಷಣೆ ಬರೆದಿದ್ದಾರೆ.
ಮನೋಜ್ ಪಿ., ಜಿ.ಎಂ.ಆರ್. ಕುಮಾರ್(ಕೆವಿಜಿ), ಜೆ.ಎನ್.ವಿ ಎಂಟರ್‌ಟೇನರ್ಸ್ ಮತ್ತು ಡಿ.ಎಸ್. ಪ್ರವೀಣ್ ಸಿನಿಮಾದ ಸಹ ನಿರ್ಮಾಪಕರು. ಲೋಕೇಶ್ ಹಿತ್ತಲಕೊಪ್ಪ ಕಾರ್ಯಕಾರಿ ನಿರ್ಮಾಣ ಮತ್ತು ನಿರಂಜನ್ ಹಾವಣಗಿ ಅವರ ಹಣಕಾಸು ನಿರ್ವಹಣೆ ಸಿನಿಮಾಕ್ಕಿದೆ.
___

Be the first to comment