ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರದ ಟ್ರೈಲರ್ ಅಕ್ಟೋಬರ್ 9ರಂದು ಬಿಡುಗಡೆ ಆಗಲಿದೆ.
ಗಂಧದ ಗುಡಿ ಕಮಷಿರ್ಯಲ್ ಸಿನಿಮಾ ಅಲ್ಲ. ವನ್ಯಮೃಗ, ಕಾಡು ಕುರಿತ ಡಾಕ್ಯುಮೆಂಟರಿ ಇದಾಗಿದೆ.
ರಾಜ್ಯದ ಬಹುತೇಕ ಎಲ್ಲ ಭಾಗಗಳಿಗೆ ಪುನೀತ್, ಅಮೋಘ ವರ್ಷ ಹಾಗೂ ಚಿತ್ರತಂಡ ಪ್ರವಾಸ ಮಾಡಿ ಚಿತ್ರೀಕರಣ ಮಾಡಲಾಗಿದೆ. ಸಮುದ್ರದ ಆಳದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ.
ಪುನೀತ್ ರಾಜ್ ಕುಮಾರ್ ಅವರು ‘ಗಂಧದ ಗುಡಿ’ ಹೆಸರನ್ನಿಟ್ಟು ಸಿನಿಮಾಕ್ಕೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಚಿತ್ರ ನೈಜವಾಗಿ ಮೂಡಿ ಬರಬೇಕು ಎಂದು ಎಲ್ಲಿಯೂ ಬಣ್ಣ ಹಚ್ಚದೆ ನಟಿಸಿದ್ದಾರೆ. ಈ ಸಿನಿಮಾದ ನಿರ್ದೇಶಕ ಅಮೋಘ ವರ್ಷ.
ಪುನೀತ್ ನಿಧನದ ಬಳಿಕ ‘ಗಂಧದ ಗುಡಿ’ಯ ಕೆಲಸವನ್ನು ಅವರ ಪತ್ನಿ ಅಶ್ವಿನಿ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಸಾಕಾರಗೊಳಿಸುತ್ತಿದ್ದಾರೆ.
‘ಗಂಧದ ಗುಡಿ’ ಸಿನಿಮಾವನ್ನು ರಾಜ್ಯದ ನಾನಾ ಕಡೆಗಳ ಅರಣ್ಯಕ್ಕೆ ಭೇಟಿ ನೀಡಿ ಶೂಟ್ ಮಾಡಲಾಗಿದೆ. ಡಿಸೆಂಬರ್ 6ರಂದು ಚಿತ್ರದ ಟೀಸರ್ ರಿಲೀಸ್ ಆಗಿದ್ದು ನೋಡುಗರಿಂದ ಮೆಚ್ಚುಗೆ ಪಡೆದಿದೆ.
___

Be the first to comment