ಡಿ.23ಕ್ಕೆ ವೇದ ಚಿತ್ರ ರಿಲೀಸ್

ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರ ಡಿಸೆಂಬರ್ 23ಕ್ಕೆ ತೆರೆಗೆ ಬರಲಿದೆ.

ಈಗಾಗಲೇ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಷನ್ ನಾಲ್ಕನೇ ಬಾರಿಗೆ ತೆರೆಗೆ ಬರುತ್ತಿದೆ. ಫಸ್ಟ್ ಲುಕ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ವೇದ ಸಿನಿಮಾ ಚಿತ್ರ ಪ್ರೇಮಿಗಳಿಗೆ ನಿರೀಕ್ಷೆ ಹುಟ್ಟಿಸಿದೆ.

ಎ.ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ ಬಂದ `ವಜ್ರಕಾಯ’, `ಭಜರಂಗಿ’, `ಭಜರಂಗಿ 2′, ಸಿನಿಮಾಗಳು ಚಿತ್ರಮಂದಿರದಲ್ಲಿ ಮೋಡಿ ಮಾಡಿತ್ತು.

1960ರ ನೈಜ ಕಥೆಯನ್ನ ಹೇಳಲು ಭಿನ್ನ ಅವತಾರದ ಮೂಲಕ ಶಿವಣ್ಣ ಎಂಟ್ರಿಕೊಡೋಕೆ ಸಜ್ಜಾಗಿದ್ದಾರೆ. ಶಿವಣ್ಣನ ಹೊಸ ಲುಕ್ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ.

ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಗಾನವಿ ನಟಿಸಿದ್ದಾರೆ. ನಟಿ ಶ್ವೇತಾ ಚೆಂಗಪ್ಪ, ಉಮಾಶ್ರೀ, ಜಗಪ್ಪ, ರಘು ಶಿವಮೊಗ್ಗ, ವೀಣಾ ಪೊನ್ನಪ್ಪ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!