ಚಿತ್ರ: ಕಾಂತಾರ
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್ ಇತರರು.
ರೇಟಿಂಗ್: 4/5
ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕತೆಯನ್ನು ಕರಾವಳಿಯ ಶ್ರೀಮಂತ ಸಂಸ್ಕೃತಿಯ ಸೊಗಡಿನ ಜೊತೆಗೆ ಕಾಂತಾರ ಅನಾವರಣ ಮಾಡುತ್ತದೆ.
ಕನ್ನಡ ಸಿನಿಮಾಗಳಲ್ಲಿ ಕರಾವಳಿಯ ಭೂತಕೋಲ ಮತ್ತು ಕಂಬಳ ಕ್ರೀಡೆಯನ್ನು ದೊಡ್ಡ ಮಟ್ಟದಲ್ಲಿ ತೋರಿಸಿದ ಕೀರ್ತಿ ಈ ಸಿನಿಮಾಗೆ ಸಲ್ಲುತ್ತದೆ. ಮೂಲ ಆಶಯಗಳಿಗೆ ಧಕ್ಕೆಯಾಗದೆ ಮೈನವಿರೇಳಿಸುವಂತೆ ರಿಷಬ್ ಪ್ರೇಕ್ಷಕರ ಎದುರು ಭೂತಕೋಲವೆಂಬ ದೈವ ಕಲೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಯ 15 ನಿಮಿಷ ಕ್ಲೈಮ್ಯಾಕ್ಸ್ ಅದ್ಭುತ ಆಗಿ ಮೂಡಿ ಬಂದಿದೆ.
ಶಿವ ಮತ್ತು ಅವನ ತಂಡ ಪ್ರಕೃತಿಯ ವಿರುದ್ಧ ಕೆಲಸ ಮಾಡುತ್ತದೆ. ಕೊನೆಯಲ್ಲಿ ಹಳ್ಳಿಗರು ಮತ್ತು ದುಷ್ಟ ಶಕ್ತಿಗಳ ನಡುವೆ ಯುದ್ಧ ಶುರುವಾಗುತ್ತದೆ. ಶಿವ ತನ್ನ ಅಸ್ತಿತ್ವವನ್ನು ಗ್ರಹಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವನೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ನಿರ್ದೇಶಕನ ಜೊತೆಗೆ ನಟನಾಗಿ ರಿಷಬ್ ಎಲ್ಲರ ಮನ ಗೆದ್ದಿದ್ದಾರೆ. ಹೊಸಬರಾದರೂ ತಮಗೆ ಸಿಕ್ಕ ಪಾತ್ರವನ್ನು ಸಪ್ತಮಿ ಗೌಡ ಚೊಕ್ಕದಾಗಿ ನಿಭಾಯಿಸಿದ್ದಾರೆ.
ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಉಗ್ರಂ ರವಿ ಸೇರಿದಂತೆ ಘಟಾನುಘಟಿ ನಟರ ದಂಡೇ ಇದೆ.
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಪೂರಕ ಆಗಿ ಕೆಲಸ ಮಾಡಿದೆ. ವಿಜಯ ಪ್ರಕಾಶ್, ಅನನ್ಯಾ ಭಟ್ ದನಿಯಲ್ಲಿ ಹಾಡುಗಳು ಸುಂದರವಾಗಿ ಮೂಡಿ ಬಂದಿವೆ.
********@bcinemasmedia

Be the first to comment