ರಾಯಚೂರು: ಮಂಗಳವಾರ ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ಶಕ್ತಿ ಅತಿಥಿ ಗೃಹದಲ್ಲಿ ಶೌಚಕ್ಕೆ ತೆರಳಿದ್ದಾಗ ಹಿರಿಯ ನಟ ದೊಡ್ಡಣ್ಣ ಅವರು ಕಾಲು ಜಾರಿ ಬಿದ್ದ ಘಟನೆ ನಡೆದಿದೆ.
ಸ್ವಲ್ಪ ಸಮಯವಾದರೂ ದೊಡ್ಡಣ್ಣ ಬಾರದೆ ಇರುವುದುನ್ನು ಗಮನಿಸಿದ ಪತ್ನಿ ಕೂಗಿದ್ದಾರೆ. ನಂತರ ಸಿಬ್ಬಂದಿ ಸಹಕಾರದಿಂದ ಕೊಠಡಿಯಲ್ಲಿ ಬಿದ್ದಿದ್ದ ದೊಡ್ಡಣ್ಣ ಅವರನ್ನು ಹಾಸಿಗೆ ಮೇಲೆ ಮಲಗಿಸಿದರು. ಆ ಬಳಿಕ ಆರ್ಟಿಪಿಎಸ್ ವೈದ್ಯ ಡಾ.ರಮೇಶ ಪ್ರಥಮ ಚಿಕಿತ್ಸೆ ನೀಡಿ ತುರ್ತು ಚಿಕಿತ್ಸೆಗಾಗಿ ಆರ್ಟಿಪಿಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪತ್ನಿ ಜತೆ ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ದೇವರ ದರ್ಶನ ಪಡೆದು, ಅತಿಥಿಗೃಹದಲ್ಲಿ ತಂಗಿದ್ದರು.
Pingback: Tow Seaside
Pingback: CICD