ಡಾ. ರಾಜ್ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರದ ಶೀರ್ಷಿಕೆಯಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಿದೆ.
‘ಜೇಡರ ಬಲೆ’ 1968ರಲ್ಲಿ ಬಿಡುಗಡೆ ಆಗಿತ್ತು. ಈಗ 54 ವರ್ಷಗಳ ಬಳಿಕ ಅದೇ ಶೀರ್ಷಿಕೆಯಲ್ಲಿ ಚಿತ್ರ ತಯಾರಾಗುತ್ತಿದೆ.
‘ಮಂಗಳವಾರ ರಜಾದಿನ’ ಸಿನಿಮಾವನ್ನು ನಿರ್ದೇಶಿಸಿದ್ದ ಯುವಿನ್ ಅವರು ‘ಜೇಡರ ಬಲೆ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಕಾಸ್ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಸಿದ್ವಿಕ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ‘ಜೇಡರ ಬಲೆ’ ಸಿದ್ಧವಾಗಲಿದೆ.
‘ನಾನು ಅಣ್ಣವ್ರ ಅಭಿಮಾನಿ. ಅವರ ಚಿತ್ರಗಳೆಂದರೆ ನನಗೆ ತುಂಬ ಇಷ್ಟ. ನಮ್ಮ ಚಿತ್ರದಲ್ಲೂ ಸಸ್ಪೆನ್ಸ್ ಕಥಾಹಂದರ ಇರುವುದರಿಂದ ‘ಜೇಡರ ಬಲೆ’ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸುತ್ತೇವೆ’ ಎಂದು ನಿರ್ಮಾಪಕ ವಿಕಾಸ್ ಗೌಡ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಚಿತ್ರದ ವಿವರ ಹೇಳುವುದಾಗಿ ಚಿತ್ರತಂಡ ತಿಳಿಸಿದೆ.
1968ರಲ್ಲಿ ಬಿಡುಗಡೆಯಾದ ‘ಜೇಡರ ಬಲೆ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಡಾ. ರಾಜ್ಕುಮಾರ್, ಜಯಂತಿ, ಕೆ.ಎಸ್. ಅಶ್ವತ್ಥ್, ಉದಯ್ಕುಮಾರ್, ನರಸಿಂಹರಾಜು ಮುಂತಾದವರು ಚಿತ್ರದಲ್ಲಿ ನಟಿಸಿದ್ದರು. ದೊರೈ-ಭಗವಾನ್ ಡೈರೆಕ್ಷನ್ ಮಾಡಿದ್ದರು. ಬಾಂಡ್ ಶೈಲಿಯಲ್ಲಿ ಮೂಡಿಬಂದಿದ್ದ ಚಿತ್ರಕ್ಕೆ ಜನಮೆಚ್ಚಿಗೆ ಸಿಕ್ಕಿತ್ತು.
___





Be the first to comment