ಕೆಜಿಎಫ್ 2 ಬಳಿಕ ಕಬ್ಜ ದಾಖಲೆ

ಕೆಜಿಎಫ್ ಚಾಪ್ಟರ್ 2 ಬಳಿಕ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರದ ಟೀಸರ್ ಎನ್ನುವ ಹೆಗ್ಗಳಿಕೆಗೆ ಕಬ್ಜ ಪಾತ್ರವಾಗಿದೆ.

ಈ ಟೀಸರ್ ಮೊದಲ 24 ಗಂಟೆಗಳಲ್ಲಿ 12.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಅಪ್ಪು ಅಭಿನಯದ ಜೇಮ್ಸ್ ಚಿತ್ರದ ಕನ್ನಡ ಟೀಸರ್ ಮೊದಲ 24 ಗಂಟೆಗಳಲ್ಲಿ 10.2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು.

ಒಂದು ವೇಳೆ ಜೇಮ್ಸ್ ನ ಎಲ್ಲಾ ಭಾಷೆಯ ಟೀಸರ್‌ಗಳನ್ನೂ ಸೇರಿಸಿ ಮೊದಲ 24 ಗಂಟೆಗಳ ವೀಕ್ಷಣೆಗಳನ್ನು ಗಣನೆಗೆ ತೆಗೆದುಕೊಂಡರೆ ಇದು ಕಬ್ಜವನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಳ್ಳಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಟೀಸರ್ ಎಲ್ಲವೂ ಸೇರಿದಂತೆ ಮೊದಲ 24 ಗಂಟೆಗಳಲ್ಲಿ ಜೇಮ್ಸ್ ಟೀಸರ್ 20 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರಗಳ ಟೀಸರ್ ಪೈಕಿ ಕೆಜಿಎಫ್ ಚಾಪ್ಟರ್ 2 ಟೀಸರ್ 107.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಜೇಮ್ಸ್ ( ಎಲ್ಲಾ ಭಾಷೆ ಸೇರಿ ): 20 ಮಿಲಿಯನ್, ಮೊದಲ 24 ಗಂಟೆಗಳಲ್ಲಿ ಜೇಮ್ಸ್ ಕನ್ನಡದ ಟೀಸರ್ ಪಡೆದದ್ದು 10.2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು.

777 ಚಾರ್ಲಿ ( ಎಲ್ಲಾ ಭಾಷೆ ಸೇರಿ ) 15.9 ಮಿಲಿಯನ್, ಮೊದಲ 24 ಗಂಟೆಗಳಲ್ಲಿ 777 ಚಾರ್ಲಿ ಕನ್ನಡದ ಟೀಸರ್ 6.5 ಮಿಲಿಯನ್ ವೀಕ್ಷಣೆ ಪಡೆದಿತ್ತು. ಕಬ್ಜಾ: 12.5 ಮಿಲಿಯನ್ ಕನ್ನಡ ವೀಕ್ಷಣೆ ಪಡೆದಿದೆ.ವಿಕ್ರಾಂತ್ ರೋಣ: 7.5 ಮಿಲಿಯನ್, ಮಾರ್ಟಿನ್: 7 ಮಿಲಿಯನ್ ವೀಕ್ಷಣೆ ಪಡೆದಿತ್ತು.

ಟೀಸರ್ ಮೂಲಕ ಕಬ್ಜ ಸಾಕಷ್ಟು ಕುತೂಹಲ ಮೂಡಿಸಿದೆ. ಉಪೇಂದ್ರ, ಸುದೀಪ್ ಅಲ್ಲದೇ ಬಹುತಾರಾಗಣದ ಈ ಚಿತ್ರ ಯಾವ ರೀತಿ ಕಮಾಲ್ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!