ಶುಭಮಂಗಳ ರಿಲೀಸ್ ಗೆ ರೆಡಿ

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶುಭಮಂಗಳ’ ಚಿತ್ರದ ಟೈಟಲ್ ಇಟ್ಟುಕೊಂಡಿರುವ ಹೊಸ ಚಿತ್ರ ಶುಭಮಂಗಳ ರಿಲೀಸ್ ಗೆ ಸಜ್ಜಾಗಿದೆ.

ಟೀಸರ್ ಝಲಕ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಈಗ ಟ್ರೇಲರ್ ಅನಾವರಣ ಮಾಡಿದೆ.

ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು, ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಿತ್ತು.

ನಿರ್ದೇಶಕ ಸಂತೋಷ್ ಗೋಪಾಲ್ ಮಾತನಾಡಿ, ಮದುವೆ ಮನೆಯಲ್ಲಿ ನಡೆಯುವ ಕಥೆ ಇದು. ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್, ಡ್ರಾಮಾ, ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಈ ಚಿತ್ರದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ ಎಂದರು.

ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ. ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಾಲಾಜಿ ಮುಂತಾದವರು ನಟಿಸಿದ್ದಾರೆ.

ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ ರಾಜ್ ಕ್ಯಾಮೆರಾ, ಸಂತೋಷ್ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಅವ್ಯಕ್ತ ಫಿಲ್ಮಂಸ್ ನಡಿ ಸಂತೋಷ್ ಸ್ನೇಹಿತರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮದುವೆ ಮನೆಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸಿರುವ ಚಿತ್ರತಂಡ ಅಕ್ಟೋಬರ್ 14ಕ್ಕೆ ಚಿತ್ರವನ್ನು ತೆರೆಗೆ ತರಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!