ಟ್ರೆಂಡ್ ಸೃಷ್ಟಿಸಿದ ‘ಕಬ್ಜ’ ಟೀಸರ್​

ಉಪ್ಪಿ ನಟನೆಯ ‘ಕಬ್ಜ’ ಸಿನಿಮಾದ ಟೀಸರ್​ ಯೂಟ್ಯೂಬ್​ನಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ.

ಸೆ.17ರಂದು ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿದ್ದು, ಒಂದೇ ದಿನದಲ್ಲಿ ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈಗ ಒಂದೂವರೆ ಕೋಟಿ ವೀವ್ಸ್​ ದಾಟಿ ಮುನ್ನುಗ್ಗುತ್ತಿದೆ.

ನಿರ್ದೇಶಕ ಆರ್​. ಚಂದ್ರು ಅವರ ಕೆಲಸಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಕನ್ನಡದಿಂದ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ಧೂಳೆಬ್ಬಿಸಲು ಬರುತ್ತಿದೆ ಎಂದು ಹೇಳಲಾಗುತ್ತಿದೆ.

‘ಕಬ್ಜ’ ಟೀಸರ್​ನಲ್ಲಿ ಪ್ರತಿ ಫೇಮ್​ನಲ್ಲೂ ಶ್ರೀಮಂತಿಕೆ ಕಾಣುತ್ತಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ.

ಯೂಟ್ಯೂಬ್​ನಲ್ಲಿ ಟ್ರೆಂಡ್​ ಸೃಷ್ಟಿ ಮಾಡಿರುವ ಟೀಸರ್​ ನೋಡಿ ರಾಮ್​ ಗೋಪಾಲ್​ ವರ್ಮಾ ಅವರು ಹೊಗಳಿದ್ದಾರೆ. ‘ಟೀಸರ್​ ನಿಜಕ್ಕೂ ದೊಡ್ಡದಾಗಿದೆ. ಉಪೇಂದ್ರ, ಸುದೀಪ್, ನಿರ್ದೇಶಕ ಆರ್​. ಚಂದ್ರು ಅವರಿಗೆ ಆಲ್​ ದಿ ಬೆಸ್ಟ್​ ಹೇಳುತ್ತೇನೆ. 24 ಗಂಟೆಗಳಲ್ಲಿ ಒಂದು ಕೋಟಿ ಪ್ಲಸ್​ ವೀವ್ಸ್​ ಪಡೆದುಕೊಂಡಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನನ್ನ ಸ್ವಾಗತ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಟೀಸರ್ ಭಾರೀ ನಿರೀಕ್ಷೆ ಹುಟ್ಟಿಸಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!