ನಾಳೆ ಅಲ್ಲೂರಿ ಪ್ರೀ ರಿಲೀಸ್ ಕಾರ್ಯಕ್ರಮ

ಪ್ರದೀಪ್ ವರ್ಮಾ ನಿರ್ದೇಶನದ ಆಕ್ಷನ್ ಎಂಟರ್ ಟೇನರ್ ಆಧಾರಿತ ‘ಅಲ್ಲೂರಿ’ ಚಿತ್ರ ಸೆಪ್ಟೆಂಬರ್ 23ರಂದು ತೆರೆ ಮೇಲೆ ಬರಲಿದೆ. ಸೆಪ್ಟೆಂಬರ್ 18ರಂದು ಅದ್ದೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅತಿಥಿಯಾಗಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಆಗಮಿಸಲಿದ್ದಾರೆ. ಈ ಕುರಿತು ಅಲ್ಲೂರಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದೆ.

ಶ್ರೀ ವಿಷ್ಣು ಹಾಗೂ ಕಯಾದು ಲೋಹರ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಸುಮನ್ ರಾಜ, ರವೀಂದ್ರ ಪೃಥ್ವಿರಾಜ್, ಸೇರಿದಂತೆ ಮೊದಲಾದವರು ನಟಿಸಿದ್ದಾರೆ.

ಲಕ್ಕಿ ಮೀಡಿಯಾ ಬ್ಯಾನರ್ ನಡಿ ವೇಣುಗೋಪಾಲ್ ಹಾಗೂ ಬಬಿತಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಈ ಚಿತ್ರ ಟ್ರೈಲರ್ ನಿಂದ ಸಖತ್ ಸೌಂಡ್ ಮಾಡುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!