ಸುಕೇಶ್ ಚಂದ್ರಶೇಖರ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಆತನನ್ನು ಮದುವೆಯಾಗಲು ಕೂಡ ಬಯಸಿದ್ದರು. ಈ ವಿಚಾರವನ್ನು ಸ್ವತಃ ಅವರೇ ಹೇಳಿದ್ದಾರೆ.
ಈ ವಿಚಾರವನ್ನು ಸಹನಟರಾದ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಜೊತೆ ಜಾಕ್ವೆಲಿನ್ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದ ಈ ಇಬ್ಬರು ನಟರು ಆತನ ಸಹವಾಸ ಬಿಟ್ಟುಬಿಡುವಂತೆ ತಿಳಿಸಿದ್ದರು.
ಆದರೆ ಅಷ್ಟರಲ್ಲಾಗಲೇ ಸುಕೇಶ್ ನನ್ನು ಬಹುವಾಗಿ ಹಚ್ಚಿಕೊಂಡಿದ್ದ ಜಾಕ್ವೆಲಿನ್ ಈ ನಟರ ಮಾತುಗಳನ್ನು ನಿರ್ಲಕ್ಷಿಸಿ ಈಗ ಭಾರೀ ಬೆಲೆಯನ್ನು ತೆರುವಂತಾಗಿದೆ.
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಜೊತೆಗಿನ ಗೆಳೆತನದಿಂದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ಹಲವು ಬಾರಿ ಜಾಕ್ವೆಲಿನ್ ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದರೆ ನಟಿಯ ಬಂಧನವೂ ಆಗಬಹುದು ಎನ್ನಲಾಗುತ್ತಿದೆ.
ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ಜೊತೆ ಆಪ್ತ ಸಂಬಂಧ ಇರಿಸಿಕೊಂಡಿದ್ದರು. ಹಲವು ದುಬಾರಿ ಉಡುಗೊರೆಗಳನ್ನು ಸುಕೇಶ್‌ನಿಂದ ಪಡೆದಿದ್ದು, ತನ್ನ ಸಹೋದರನಿಗೂ ಸುಕೇಶ್‌ನಿಂದ ಹಣ ಕೊಡಿಸಿದ್ದರು ಎಂದು ಹೇಳಲಾಗಿದೆ.
___

Be the first to comment