ನಾಲ್ವರು ನಟಿಯರ ಜೊತೆ ಸುಕೇಶ್ ಲಿಂಕ್

200 ಕೋಟಿ ವಂಚನೆಯ ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ.

ನಟಿ ಜಾಕ್ಲಿನ್ ಫರ್ನಾಂಡಿಸ್ ಅಲ್ಲದೇ ಇತರ ನಾಲ್ವರು ನಟಿಯರು ಸುಕೇಶ್​​ನನ್ನು ತಿಹಾರ್ ಜೈಲಿನಲ್ಲಿ ಭೇಟಿಯಾಗಿ ದುಬಾರಿ ಉಡುಗೊರೆಗಳನ್ನು ಪಡೆದಿರುವುದು ರಿವೀಲ್ ಆಗಿದೆ.

ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ನಿಕಿತಾ ತಾಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್, ಅರುಷಾ ಪಾಟೀಲ್ ಅವರು ದೆಹಲಿ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್ ನನ್ನು ಭೇಟಿಯಾಗಿದ್ದಾರೆ. ನಟಿಯರು ಆತನ ಸಹವರ್ತಿ ಪಿಂಕಿ ಇರಾನಿ ಮೂಲಕ ಆರೋಪಿಯನ್ನು ಭೇಟಿ ಮಾಡಲು ತಿಹಾರ್ ಜೈಲಿಗೆ ಹೋಗಿದ್ದರು. ಬೇರೆ ಬೇರೆ ದಿನಗಳಲ್ಲಿ ಭೇಟಿಯಾಗಿದ್ದ ಇವರು ದುಬಾರಿ ಉಡುಗೊರೆ, ಕ್ಯಾಶ್ ಕೂಡಾ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬಿಗ್ ಬಾಸ್ ಖ್ಯಾತಿಯ ನಿಕಿತಾ ತಾಂಬೋಲಿ ಹೇಳಿಕೆಯ ಪ್ರಕಾರ, ಪಿಂಕಿ ಇರಾನಿ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ‘ಶೇಖರ್’ ಎಂದು ಪರಿಚಯಿಸಿದರು. ಪಿಂಕಿ ಇರಾನಿ ಆರೋಪಿಯನ್ನು ಸೌತ್ ಸಿನಿಮಾ ಇಂಡಸ್ಟ್ರಿಯ ನಿರ್ಮಾಪಕ ಮತ್ತು ಸ್ನೇಹಿತ ಎಂದು ಇಂಟ್ರೊಡ್ಯೂಸ್ ಮಾಡಿದ್ದರು.

ಎರಡು ಸಂದರ್ಭಗಳಲ್ಲಿ ನಿಕಿತಾ ತಾಂಬೋಲಿ ತಿಹಾರ್ ಜೈಲಿನೊಳಗೆ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದರು ಎಂಬುದು ಬಹಿರಂಗವಾಗಿದೆ.

2018ರ ಏಪ್ರಿಲ್‌ನಲ್ಲಿ ನಡೆದ ಮೊದಲ ಭೇಟಿಯ ವೇಳೆ ಪಿಂಕಿ ಇರಾನಿ, ಸುಕೇಶ್ ಚಂದ್ರಶೇಖರ್ ಅವರಿಂದ 10 ಲಕ್ಷ ರೂಪಾಯಿ ನಗದು ಪಡೆದಿದ್ದು, ಅದರಲ್ಲಿ ನಿಕಿತಾ ತಾಂಬೋಲಿಗೆ 1.5 ಲಕ್ಷ ರೂ. ನೀಡಿದ್ದರು. ಎರಡನೇ ಭೇಟಿಯಲ್ಲಿ 2 ಲಕ್ಷ ರೂಪಾಯಿ ನಗದು ಮತ್ತು ಒಂದು ಗುಸ್ಸಿ ಬ್ಯಾಗ್ ನ್ನು ಸುಕೇಶ್ ಚಂದ್ರಶೇಖರ್ ನೀಡಿದ್ದಾನೆ ಎಂದು ಇಡಿ ಹೇಳಿದೆ.

ನಟಿ ಸೋಫಿಯಾ ಸಿಂಗ್, ಸಿನಿಮಾವೊಂದರ ಕೆಲಸಕ್ಕೆ ಸಂಬಂಧಿಸಿದಂತೆ ಸುಖೇಶ್ ಚಂದ್ರಶೇಖರ್ ನನ್ನು ಭೇಟಿ ಮಾಡಲು ಪಿಂಕಿ ನನ್ನನ್ನು ಸಂಪರ್ಕಿಸಿದ್ದರು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎರಡು ಸಂದರ್ಭಗಳಲ್ಲಿ, ಸೋಫಿಯಾ ಸಿಂಗ್ ತಿಹಾರ್ ಜೈಲಿನಲ್ಲಿ ಸುಖೇಶ್ ಚಂದ್ರಶೇಖರ್ ಅವರನ್ನು ಭೇಟಿಯಾದರು ಎಂದು ಹೇಳಲಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!