ಜಿಯಾ ಖಾನ್ ಸಾವು ಪ್ರಕರಣ ಮರು ತನಿಖೆಗೆ ಹೈಕೋರ್ಟ್ ನಕಾರ

ನಟಿ ಜಿಯಾ ಖಾನ್ ಸಾವು ಪ್ರಕರಣದ ಮರು ತನಿಖೆಗೆ ಹೈಕೋರ್ಟ್ ನಿರಾಕರಿಸಿದೆ.

2013ರ ಜೂನ್ 3ರಂದು ಜಿಯಾ ಖಾನ್ ಮೃತದೇಹ ಮುಂಬೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಆಕೆಯ ಬಾಯ್ ಫ್ರೆಂಡ್ ಸೂರಜ್ ಪಂಚೋಲಿ ಕೊಲೆ ಮಾಡಿದ್ದಾನೆ ಎಂದು ಗಂಭೀರ ಆರೋಪಗಳನ್ನು ತಾಯಿ ರಜಿಯಾ ಖಾನ್ ಮಾಡಿದ್ದರು. ಸಿಬಿಐ ಜಿಯಾ ಕೇಸ್ ಅನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಜಿಯಾ ಸಾವಾಗಿ 9 ವರ್ಷಗಳು ಕಳೆದರೂ ಸೂಕ್ತ ತನಿಖೆ ನಡೆದಿಲ್ಲ. ಸಿಬಿಐ ತನಿಖೆಯಲ್ಲಿ ದೋಷಗಳಿವೆ. ಹೀಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಹಕಾರದಿಂದ ತನಿಖೆ ನಡೆಸುವಂತೆ ಕೋರಿ ರಜಿಯಾ ಖಾನ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡಸಿದ ನ್ಯಾ. ಎ ಎಸ್ ಗಡ್ಕರಿ, ಎಂ ಎನ್ ಜಾಧವ್ ಅವರಿದ್ದ ದ್ವಿಸದಸ್ಯ ಪೀಠ, ಸಿಬಿಐ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ರೀತಿಯ ಅರ್ಜಿಯನ್ನು ಸಲ್ಲಿಸುವ ಮೂಲಕ ರುಬಿಯಾ ಅವರು ಪ್ರಕರಣವನ್ನು ಮತ್ತಷ್ಟು ದುರ್ಬಲ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!