ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ ಸೆಪ್ಟೆಂಬರ್ 14 ರಂದು ವಿಚಾರಣೆ ಹಾಜರಾಗುವಂತೆ ಜಾಕ್ಲಿನ್ಗೆ ನೋಟಿಸ್ ನೀಡಿದೆ.
200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೊತೆಗಿನ ಸ್ನೇಹ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಕಂಟಕವಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಟಿಯ ವಿರುದ್ಧ ಈಗಾಗಲೇ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ದೆಹಲಿ ಹೈಕೋರ್ಟ್ ನಿಂದ ಜಾಕ್ಲಿನ್ಗೆ ನೋಟಿಸ್ ಜಾರಿಯಾಗಿತ್ತು. ಇದೀಗ ದೆಹಲಿ ಪೊಲೀಸರು ಆಕೆಗೆ ಸಮನ್ಸ್ ಕಳುಹಿಸಿದ್ದಾರೆ.
ಸುಕೇಶ್ ವಂಚನೆ ಮಾಡಿದ ಹಣದಿಂದ ನಟಿಗೆ ಲಾಭವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ. ಫರ್ನಾಂಡಿಸ್ ಅವರು ಸುಕೇಶ್ ಜೊತೆ ವಿಡಿಯೋ ಕಾಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಜಾಕ್ಲಿನ್ಗೆ ಉಡುಗೊರೆ ನೀಡಿದ್ದನ್ನು ಸುಕೇಶ್ ಒಪ್ಪಿಕೊಂಡಿದ್ದಾರೆ. ಸುಕೇಶ್ ನಟಿಗೆ ಈ ಹಿಂದೆ 10 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಕಳುಹಿಸಿದ್ದನ್ನು ಇಡಿ ಪತ್ತೆ ಮಾಡಿದೆ.
ಈ ಹಿಂದೆ ಇಬ್ಬರೂ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾಕ್ವೆಲಿನ್ ಫರ್ನಾಂಡೀಸ್ ಅವರ 7 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
Be the first to comment