ವಿಲನ್ ಪಾತ್ರ ಮಾಡಲು ಸಂಜಯ್ ದತ್ ಅವರು ಭರ್ತಿ 10 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಅಧೀರ ಪಾತ್ರ ಹಿಟ್ ಆದ ಬಳಿಕ ಸಂಜಯ್ ದತ್ ಅವರಿಗೆ ಡಿಮಾಂಡ್ ಹೆಚ್ಚಿದೆ.
‘ವಿಕ್ರಮ್’ ಸಿನಿಮಾ ಮೂಲಕ ಗೆಲುವು ಕಂಡಿರುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ‘ದಳಪತಿ’ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವಂತೆ ಸಂಜಯ್ ದತ್ ಅವರಿಗೆ ಆಫರ್ ನೀಡಲಾಗಿದ್ದು, ಅದಕ್ಕಾಗಿ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಸಂಜಯ್ ದತ್ ಅವರ ಲುಕ್ ಗಮನ ಸೆಳೆದಿತ್ತು. ಅಧೀರನ ಗೆಟಪ್ ಜನರಿಗೆ ಇಷ್ಟ ಆಗಿತ್ತು. ದಕ್ಷಿಣ ಭಾರತದ ಸೂಪರ್ ಸ್ಟಾರ್ಗಳ ಚಿತ್ರದಲ್ಲಿ ಸಂಜಯ್ ದತ್ ಅವರು ಬ್ಯಾಡ್ ಬಾಯ್ ಪಾತ್ರ ಮಾಡಿದರೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂಬುದು ಎಲ್ಲ ನಿರ್ಮಾಪಕರಿಗೆ ಗೊತ್ತಾಗಿದೆ. ಹಾಗಾಗಿ ಅವರ ಕಾಲ್ ಶೀಟ್ ಪಡೆಯಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಮಿಂಚುತ್ತಿದ್ದ ಸಂಜಯ್ ದತ್ ಅವರಿಗೆ ಈಗ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿ ಆಗಿದೆ. ಅದಕ್ಕೆ ‘ಕೆಜಿಎಫ್: ಚಾಪ್ಟರ್ 2’ ಕಾರಣ ಆಗಿದೆ
Be the first to comment