ಶಿವಾಜಿ ಸುರತ್ಕಲ್ 2 ಟೀಸರ್ ರಿಲೀಸ್

ರಮೇಶ್ ಅರವಿಂದ್ ಅವರ ಹುಟ್ಟುಹಬ್ಬವಾದ ಇಂದು ಶಿವಾಜಿ ಸುರತ್ಕಲ್ 2 ಚಿತ್ರದ ಟೀಸರ್ ಬಿಡುಗಡೆ ಆಗಿದೆ.

2020ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ ಹಿಟ್ ಆದ ಕಾರಣ ಇದೀಗ ಎರಡನೇ ಭಾಗವನ್ನು ನಿರ್ಮಿಸಲಾಗುತ್ತಿದೆ. ಇದು ಸಹ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ.

ಶಿವಾಜಿ ಸುರತ್ಕಲ್ ಎರಡನೇ ಭಾಗದ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ರಮೇಶ್ ಅರವಿಂದ್ ಸೆಪ್ಟೆಂಬರ್ 10ರಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಮೇಶ್ ಅರವಿಂದ್ ತಮ್ಮ ಅಭಿಮಾನಿಗಳಿಗೆ ಶುಭ ಕೋರಲು ನಂಬರ್ ಸಹ ನೀಡಿದ್ದಾರೆ.

ರಮೇಶ್ ಹುಟ್ಟುಹಬ್ಬಕ್ಕೆ ಶುಭಕೋರಲು ಇಷ್ಟ ಇರುವವರು 8951599009 ಮತ್ತು 8951699009 ಈ ಎರಡು ನಂಬರ್‌ಗಳಲ್ಲಿ ಯಾವುದಾದರೂ ಒಂದು ನಂಬರ್‌ಗೆ ಸಂದೇಶವನ್ನು ಕಳುಹಿಸಬಹುದಾಗಿದೆ. ಸಂದೇಶ ಕಳುಹಿಸುವ ಅಭಿಮಾನಿಗಳು ತಮ್ಮ ಹೆಸರು ಹಾಗೂ ಜಿಲ್ಲೆಯ ಹೆಸರನ್ನೂ ಸೇರಿಸಿ ಕಳುಹಿಸಲು ಕೋರಲಾಗಿದೆ.

ರಮೇಶ್ ಅವರು 1986ರಲ್ಲಿ ತೆರೆಕಂಡ ಸುಂದರ ಸ್ವಪ್ನಗಳು ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ನಂತರ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟು 140ಕ್ಕೂ ಹೆಚ್ಚು ಚಿತ್ರಗಳಲ್ಲಿ ರಮೇಶ್ ಅರವಿಂದ್ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!