ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ನೂಡಲ್ಸ್ ಥರಾ ಎರಡೇ ನಿಮಿಷ ಎಂದು ಜೋಕ್ ಮಾಡಿರುವ ನಟಿ ರೆಜಿನಾ ಪುರುಷ ನೆಟಿಜನ್ಸ್ ಗಳಿಂದ ಟ್ರೋಲ್ ಗೊಳಗಾಗಿದ್ದಾರೆ.
ಡಾಕಿನಿ ಸಿನಿಮಾ ಖ್ಯಾತಿಯ ನಟಿ ರೆಜಿನಾ ಈ ಸಿನಿಮಾದ ಪ್ರಚಾರದ ವೇಳೆ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ಪಡ್ಡೆ ಹುಡುಗರು ರೆಜಿನಾರನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.
ಈ ರೀತಿಯ ಹೇಳಿಕೆ ನೀಡಿರುವ ರೆಜಿನಾ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಟಿಯಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ಹೇಗೆ ಗೊತ್ತು? ನೀವು ಇನ್ನೂ ಮದುವೆನೇ ಆಗಿಲ್ವಲ್ಲಾ? ಎಂದು ಕಾಲೆಳೆಯುತ್ತಿದ್ದಾರೆ.
ರಜಿನಾ ಹಾಗೂ ನಿವೇತಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸುಧೀರ್ ವರ್ಮಾ ಆಯಕ್ಷನ್ ಕಟ್ ಹೇಳಿದ್ದಾರೆ. ಈ ಇಬ್ಬರೂ ನಟಿಯರು ಶಾಕಿನಿ ಡಾಕಿನಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು.
ರೆಜಿನಾ ಈ ಮೊದಲು ಕನ್ನಡದ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಇಂತಹದ್ದೊಂದು ವಿವಾದದ ಮೂಲಕ ಭಾರೀ ಸುದ್ದಿ ಮಾಡಿದ್ದಾರೆ.
__
Be the first to comment