ಸೀತಾರಾಮ್ ಬೆನೊಯ್ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ದೇವಿ ಪ್ರಸಾದ್ ಶೆಟ್ಟಿ ವಿಜಯ್ ರಾಘವೇಂದ್ರ ಜೊತೆಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.
ಕ್ರೈಮ್ ಸಿನಿಮಾಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ಬರಹಗಾರ ಮತ್ತು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಕೇಸ್ ಆಫ್ ಕೊಂಡನಾ ಹೆಸರಿನ ಮತ್ತೊಂದು ತನಿಖಾ ಥ್ರಿಲ್ಲರ್‌ನೊಂದಿಗೆ ಚಿತ್ರಕ್ಕೆ ಮರಳಿದ್ದಾರೆ.
ಚಿತ್ರ 09/2018 ಹೆಸರಿನ ಟ್ಯಾಗ್ ಲೈನ್ ಇದೆ. ಕೇಸ್ ಆಫ್ ಕೊಂಡನಾ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾವನಾ ಮೆನನ್ ಚಿತ್ರದಲ್ಲಿ ಇದ್ದಾರೆ.
ಭಾವನಾ ಮೆನನ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲಾವಿದರನ್ನು ಅಂತಿಮ ಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರ ತಂಡ ನಿರತವಾಗಿದೆ.
ವಿಜಯ್ ರಾಘವೇಂದ್ರ ಒಬ್ಬ ಅತ್ಯದ್ಭುತ ನಟ. ಅವರು ನನ್ನ ಮೊದಲ ಚಿತ್ರಕ್ಕೆ ತುಂಬಾ ಬೆಂಬಲ ನೀಡಿದರು. ನನ್ನ ಅವರ ಎರಡನೇ ಕಾಂಬಿನೇಷನ್ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಹಲವು ತಿರುವುಗಳ ಜೊತೆಗೆ ಸಾಕಷ್ಟು ಥ್ರಿಲ್ಲರ್ ಇದೆ ಎಂದು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಸಾತ್ವಿಕ್ ಹೆಬ್ಬಾರ್, ಅರವಿಂದ್ ಶೆಟ್ಟಿ ಜೊತೆಗೆ ದೇವಿಪ್ರಸಾದ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೇಸ್ ಆಫ್ ಕೊಂಡಾಣದ ಸಂಯೋಜಕರಾಗಿ ಪೂರ್ಣಚಂದ್ರ ತೇಜಸ್ವಿ, ವಿಶ್ವಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆಯುತ್ತಿದ್ದಾರೆ.
ಚಿತ್ರದ ಅಧಿಕೃತ ಲಾಂಚ್ ಸೆಪ್ಟೆಂಬರ್ 8 ರಂದು ನಡೆಯಲಿದೆ. ಸೆಪ್ಟೆಂಬರ್ 28 ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.
___
Be the first to comment